ಗುಲ್ಬರ್ಗ ವಿಶ್ವವಿದ್ಯಾಲಯ: 491 ಹುದ್ದೆ ಖಾಲಿ!

ಕಲಬುರ್ಗಿ: 35 ವರ್ಷಗಳಷ್ಟು ಹಳೆಯ ದಾದ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬರೋಬ್ಬರಿ 146 ಬೋಧಕ ಹಾಗೂ 345 ಬೋಧಕೇತರ ಹುದ್ದೆಗಳು ಖಾಲಿ ಉಳಿದಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ.
ಗುಲ್ಬರ್ಗ ವಿ.ವಿ ಮುಖ್ಯ ಕ್ಯಾಂಪಸ್ಗೆ 33 ಪ್ರಾಧ್ಯಾಪಕ, 65 ಸಹಾಯಕ ಪ್ರಾಧ್ಯಾಪಕ ಹಾಗೂ 142 ಸಹ ಪ್ರಾಧ್ಯಾಪಕರ ಹುದ್ದೆಗಳು ಮಂಜೂ ರಾಗಿವೆ. ಅದೇ ರೀತಿ ರಾಯಚೂರು ಮತ್ತು ಬೀದರ್ ಸ್ನಾತಕೋತ್ತರ ಕೇಂದ್ರ ಗಳಿಗೆ ಕ್ರಮವಾಗಿ 3, 2 ಮತ್ತು 3 ಹುದ್ದೆ ಗಳು ಮಂಜೂರಾಗಿವೆ. ಈ ಪೈಕಿ 13 ಪ್ರಾಧ್ಯಾಪಕರು, 24 ಸಹಾಯಕ ಪ್ರಾಧ್ಯಾ ಪಕರು ಮತ್ತು 65 ಸಹ ಪ್ರಾಧ್ಯಾಪಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದಡಿ 31 ಬೋಧಕತೇರ ಹುದ್ದೆಗಳು ಮಂಜೂರಾ ಗಿದ್ದು, ಈ ಪೈಕಿ 21 ಜನ ಕಾರ್ಯ ನಿರ್ವಹಿಸುತ್ತಿದ್ದರೆ, 10 ಹುದ್ದೆಗಳು ಖಾಲಿ ಉಳಿದಿವೆ. ಅದೇ ರೀತಿ, ರಾಜ್ಯ ವೇತನದಡಿ ಮಂಜೂರಾಗಿರುವ 675 ಬೋಧಕೇತರ ಹುದ್ದೆಗಳ ಪೈಕಿ 361 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 335 ಹುದ್ದೆಗಳು ಖಾಲಿ ಉಳಿದಿವೆ.
‘ಅತಿಥಿ’ಗಳೇ ಆಸರೆ: ಗುಲ್ಬರ್ಗ ವಿಶ್ವವಿ ದ್ಯಾಲಯದಲ್ಲಿ 38 ವಿಭಾಗಗ ಳಿದ್ದು, ಬಹುತೇಕ ಎಲ್ಲ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸು ತ್ತಿದ್ದಾರೆ. ಸುಮಾರು 250 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ವಿ.ವಿಗೆ ಇವರೇ ‘ಆಸರೆ’ಯಾದಂತಾಗಿದೆ. ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕ ರಿಗೆ ಸರ್ಕಾರ ಗೌರವಧನ ನೀಡಲು ಬರುವು ದಿಲ್ಲ. ಹೀಗಾಗಿ, ಹೊರೆಯಾದರೂ ವಿ.ವಿಯೇ ಗೌರವಧನ ನೀಡಬೇಕಾಗಿದೆ.
16 ಮಂದಿ ನಿವೃತ್ತಿ: ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ 16 ಮಂದಿ ಮೇ ತಿಂಗಳೊಂದರಲ್ಲೇ ನಿವೃತ್ತಿಯಾಗಿದ್ದಾರೆ. ಡಿಸೆಂಬರ್ನಲ್ಲಿ ಮತ್ತೆ ಮೂವರು ನಿವೃತ್ತರಾಗಲಿದ್ದಾರೆ. ಹೊಸ ನೇಮಕಾತಿ ಮಾಡಿಕೊಳ್ಳದ್ದರಿಂದ ವಿ.ವಿಯಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇದರಿಂದಾಗಿ ಕಚೇರಿ ಕೆಲಸಗಳ ನಿರ್ವಹಣೆಗೆ ಈಗಿರುವ ಸಿಬ್ಬಂದಿ ಪರದಾಡುವಂತಾಗಿದೆ. ಅಷ್ಟೇ ಅಲ್ಲ, ಹೆಚ್ಚುವರಿಯಾಗಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಂಪೂರ್ಣ ಖಾಲಿ, ಖಾಲಿ:ಗಾರ್ಡನ್ ಸೂಪರಿಂಟೆಂಡೆಂಟ್, ಕಿರಿಯ ಎಂಜಿನಿ ಯರ್, ಡ್ರಾಫ್ಟ್ಸ್ಮನ್, ಎಲೆಕ್ಟ್ರಿಕಲ್ ಸೂಪರ್ವೈಸರ್, ವಾಲ್ವ್ಮೆನ್/ಫಿಟ್ಟರ್, ಪ್ಲಂಬರ್, ವೈದ್ಯಕೀಯ ಅಧಿಕಾರಿ, ಸ್ಟಾಫ್ನರ್ಸ್, ಕಾಂಪೌಂಡರ್, ವಾರ್ಡ್ ಬಾಯ್, ಪ್ರಯೋಗಾಲಯ ಸಹಾಯಕ, ಹಿರಿಯ ಪ್ರಯೋಗಾಲಯ ಸಹಾಯಕ, ಪ್ರಯೋಗಾಲಯ ಸಹಾಯಕರು, ಪ್ರಯೋಗಾಲಯ ತಂತ್ರಜ್ಞ, ಭದ್ರತಾ ಸಿಬ್ಬಂದಿ, ಮ್ಯೂಸಿಯಂ ಕ್ಯುರೇಟರ್, ತೋಟಗಾರಿಕಾ ಸಹಾಯಕ, ಬಡಗಿ, ಕಲಾವಿದ, ಡಾರ್ಕ್ರೂಂ ಸಹಾಯಕ, ಗ್ಲಾಸ್ ಬ್ಲೋವರ್, ವಿದ್ಯಾರ್ಥಿ ಕಲ್ಯಾಣಾ ಧಿಕಾರಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ, ಸಹಾಯಕ ಸಂಶೋಧಕರು, ದಾಖಲಾತಿ ಅಧಿಕಾರಿ ಸೇರಿದಂತೆ ಒಟ್ಟು 81 ಹುದ್ದೆಗಳು ಮಂಜೂರಾಗಿದ್ದು, ಎಲ್ಲ ಹುದ್ದೆಗಳೂ ಖಾಲಿ ಉಳಿದಿವೆ.
***
ಬೋಧಕ ಮತ್ತು ಬೋಧಕತೇರ ಸಿಬ್ಬಂದಿ ಸೇರಿದಂತೆ ಶೇ 60ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ಶೈಕ್ಷಣಿಕ ಮತ್ತು ಕಚೇರಿ ಕೆಲಸಗಳಲ್ಲಿ ತೊಂದರೆಯಾಗುತ್ತಿದೆ.
-ಪ್ರೊ.ಚಂದ್ರಕಾಂತ ಯಾತನೂರ, ಕುಲಸಚಿವ, ಗುಲ್ಬರ್ಗ ವಿ.ವಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.