ಶನಿವಾರ, 24 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
18/01/2026 - 24/01/2026
ವಾರ ಭವಿಷ್ಯ: 25-1-2026ರಿಂದ 31-1-2026 ರವರೆಗೆ; ಸಂಗಾತಿಯ ಆರೋಗ್ಯಕ್ಕಾಗಿ ಶ್ರಮ
Published 24 ಜನವರಿ 2026, 18:35 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುವುದು ಕಡಿಮೆ. ಆದಾಯವು ಸಾಮಾನ್ಯವಾಗಿದ್ದರೂ, ಅದನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳು ದೊರೆಯುತ್ತವೆ. ಗುರುಹಿರಿಯರ ಬಗ್ಗೆ ತಾತ್ಸಾರ ಖಂಡಿತ ಬೇಡ. ಆಸ್ತಿ ಸಂಬಂಧಿತ ದಾಖಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಕರಿದ ಪದಾರ್ಥಗಳನ್ನು ತಯಾರಿಸಿ, ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚು ಶಿಸ್ತನ್ನು ಕಾಯ್ದುಕೊಳ್ಳುವುದು ಉತ್ತಮ. ಸಂಗಾತಿಯ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ.
ವೃಷಭ
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ಎಲ್ಲರೊಂದಿಗೆ ಕಲಾತ್ಮಕವಾಗಿ ಮಾತನಾಡಿ ಜನರನ್ನು ಸೆಳೆಯುವಿರಿ. ಆದಾಯವು ನಿಮ್ಮ ಅಗತ್ಯವನ್ನು ಮೀರಿರುತ್ತದೆ. ಸಂಘ–ಸಂಸ್ಥೆಗಳಿಂದ ಆಸ್ತಿ ಪಡೆಯುವ ಯೋಗವಿದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ವೃತ್ತಿಯಲ್ಲಿ ಸ್ವಲ್ಪ ಅನುಕೂಲತೆ ಇರುತ್ತದೆ. ಮನೆಯಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯವಾಗಬಹುದು. ಕೃಷಿಯಿಂದ ಆದಾಯವಿರುತ್ತದೆ. ಕೆಲವರಿಗೆ ಕಚೇರಿಯಲ್ಲಿ ತರಬೇತಿ ಸಿಗಲಿದೆ.
ಮಿಥುನ
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ಈ ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ. ಖರ್ಚಿಗೆ ಕಡಿವಾಣ ಹಾಕಬೇಕಾದ ಪರಿಸ್ಥಿತಿ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಶ್ರಮವಹಿಸಬೇಕು. ಸಮಾನ ಮನಸ್ಕರಲ್ಲಿ ಹಣಕಾಸಿನ ವಿಚಾರದಿಂದ ಸಂಬಂಧಗಳು ಹದಗೆಡಬಹುದು. ನಿಮ್ಮ ಮಕ್ಕಳ ಆಸೆಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ) ಮನಸ್ಸಿಗೆ ಹೊಸ ಚೈತನ್ಯ ಬಂದಂತೆ ಅನಿಸುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಮಾತನಾಡುವಾಗ ಎಚ್ಚರವಿರಲಿ. ನಿಷ್ಠುರದ ಮಾತುಗಳು ಬೇಡ. ಸಂಗಾತಿಯ ವ್ಯವಹಾರಗಳಲ್ಲಿ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಎಲೆಕ್ಟ್ರಾನಿಕ್ಸ್ ಉದ್ದಿಮೆದಾದರಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಆಸ್ತಿಯ ವಿಚಾರಗಳಲ್ಲಿ ಹೊಸ ತಗಾದೆಗಳು ಬರಬಹುದು. ವಿದೇಶದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ.
ಸಿಂಹ
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಹಿರಿಯರ ಜೊತೆ ಹೆಚ್ಚು ಕಾಲ ಕಳೆಯುವಿರಿ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತಗಳನ್ನು ಕಾಣಬಹುದು. ಆಸ್ತಿಮಾಡುವ ವಿಚಾರದಲ್ಲಿ ಆತುರಬೇಡ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಕೆಲವರಿಗೆ ಈಗ ಶಸ್ತ್ರಚಿಕಿತ್ಸೆಯ ಅಗತ್ಯ ಬರಬಹುದು. ಸ್ನೇಹಿತರ ಅನುಕೂಲದಿಂದ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ.
ಕನ್ಯಾ
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3) ನಿಮ್ಮ ಅತಿಯಾದ ಒರಟುತನ ನಿಮ್ಮನ್ನು ಜನ ಸಮೂಹದಲ್ಲಿ ಇಕ್ಕಟ್ಟಿಗೆ ಸಿಲುಕಿಸಬಹುದು. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳು ಹುಟ್ಟಿಕೊಳ್ಳುವರು. ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸ ಸರಾಗವಾಗಿ ಆಗುತ್ತದೆ. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ವ್ಯಾಪಾರ ಹೆಚ್ಚಾಗುತ್ತದೆ. ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮವಹಿಸಬೇಕಾದ ಅಗತ್ಯವಿದೆ.
ತುಲಾ
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ) ಸಾಹಸ ಕ್ರೀಡೆಗಳತ್ತ ಮನಸ್ಸು ಹರಿಯುತ್ತದೆ. ಆದಾಯವು ಅಗತ್ಯವನ್ನು ಪೂರೈಸುತ್ತದೆ. ಬಂಧುಗಳ ಕಸಿವಿಸಿಗಳನ್ನು ಎದುರಿಸಿ ನಿಲ್ಲುವಿರಿ. ಸಾಂಪ್ರದಾಯಿಕ ಬೆಳೆಗಳ ತಳಿರಕ್ಷಕರಿಗೆ ಹೆಚ್ಚು ಗೌರವ ಸಿಗುತ್ತದೆ. ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹರಿಯ ತೊಡಗುತ್ತದೆ. ಈಗ ಆತ್ಮೀಯರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಂಡು ಸಂತೋಷ ಪಡುವಿರಿ. ಪ್ರಯಾಣದಲ್ಲಿ ನಷ್ಟ ಸಂಭವಿಸುವ ಸಾಧ್ಯತೆಗಳಿವೆ ಎಚ್ಚರ. ಕಟ್ಟಡ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ.
ವೃಶ್ಚಿಕ
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ಮನಸ್ಸು ಪ್ರಫುಲ್ಲತೆಯಿಂದ ಕೂಡಿರುತ್ತದೆ. ಆದಾಯವು ಚೇತರಿಸಿಕೊಳ್ಳುತ್ತದೆ. ಸರ್ಕಾರಿ ಸಹಾಯಧನಗಳು ದೊರೆಯುತ್ತವೆ. ಯಾರಿಗೂ ಯಾವುದೇ ರೀತಿಯ ಭರವಸೆಗಳನ್ನು ನೀಡಬೇಡಿ. ವಾಹನ ಖರೀದಿಯು ನಿಮ್ಮಿಷ್ಟದಂತೆ ನಡೆಯುತ್ತದೆ. ಉದ್ಯೋಗಕ್ಕೆ ಅನುಕೂಲವಾಗುವ ಹೊಸ ಜನರ ಪರಿಚಯವಾಗುತ್ತದೆ. ಮಿತ್ರರ ಜೊತೆ ಸೇರಿ ಸಣ್ಣಮಟ್ಟದ ಉತ್ಪಾದನಾ ಘಟಕವನ್ನು ಆರಂಭಿಸುವ ಆಲೋಚನೆ ಇರುತ್ತದೆ. ಸಂಬಂಧಿಕರಿಗೆ ಕೊಟ್ಟ ಸಾಲ ಮರಳಿ ಬರುವುದಿಲ್ಲ.
ಧನು
ಮಕರ
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ಮುನ್ನುಗುವ ಉತ್ಸಾಹ ಹೆಚ್ಚಾಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಶತ್ರುಗಳನ್ನು ಮಣಿಸುವಲ್ಲಿ ಯಶಸ್ವಿಯಾಗುವಿರಿ.ಆಸ್ತಿಯನ್ನು ಮಾಡುವ ಅವಕಾಶಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ ಇರುತ್ತದೆ. ನಿಮ್ಮ ಸಮಸ್ಯೆಗಳನ್ನು ನ್ಯಾಯಯುತವಾಗಿ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಿರಿ. ಪಿತ್ತವಿಕಾರಗಳು ಕೆಲವರನ್ನು ಬಾಧಿಸಬಹುದು. ಮನೆಯಲ್ಲಿನ ಆಗುಹೋಗುಗಳ ಬಗ್ಗೆ ಹೆಚ್ಚಿನ ಗಮನ ಕೊಡಿ. ನೀವು ಮಾಡಿದ್ದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆ ಯೋಗವಿರುತ್ತದೆ.
ಕುಂಭ
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ವ್ಯಾಯಾಮವನ್ನು ಮಾಡಿ ದೇಹ ದಂಡಿಸುವಿರಿ. ಆದಾಯವು ಕಡಿಮೆ ಇರುತ್ತದೆ. ಕೃಷಿಯಿಂದ ಲಾಭವಿರುತ್ತದೆ. ಆಸ್ತಿ ಮಾಡಲು ಬೇಕಾದ ಹಣದ ಬಗ್ಗೆ ಆಲೋಚನೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ. ಶೀತಬಾಧೆ ಕೆಲವರನ್ನು ಕಾಡಬಹುದು. ಸಹಕಾರಿ ರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯನ್ನು ಮಾಡುವವರು ಎಚ್ಚರವಹಿಸಿ. ನಿಮ್ಮ ಶ್ರಮದ ದುಡಿಮೆಗೆ ತಕ್ಕ ಫಲವಿರುತ್ತದೆ.
ಮೀನ
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ಯಾವುದೇ ಕೆಲಸ ಮಾಡಲು ಮನಸ್ಸು ಇರುವುದಿಲ್ಲ. ಆದಾಯವು ಕಡಿಮೆ ಇದ್ದು, ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು. ಹೊಸ ಆಸ್ತಿ ಖರೀದಿ ಮಾಡುವ ವಿಚಾರ ಮುನ್ನೆಲೆಗೆ ಬರುತ್ತದೆ. ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚುತ್ತದೆ. ನಿಮ್ಮ ನಡವಳಿಕೆಯಿಂದ ಬಂಧುಗಳು ದೂರವಾಗುವರು. ಹೊಟ್ಟೆಯಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು.
ADVERTISEMENT
ADVERTISEMENT