ಸೈಕಲ್‌ಗಳು ಸಜ್ಜು: ಅಂಗಳ ರಾಡಿ!

7

ಸೈಕಲ್‌ಗಳು ಸಜ್ಜು: ಅಂಗಳ ರಾಡಿ!

Published:
Updated:
ಸೈಕಲ್‌ಗಳು ಸಜ್ಜು: ಅಂಗಳ ರಾಡಿ!

ಕಾಳಗಿ: ಪ್ರಸಕ್ತ ಶೈಕ್ಷಣಿಕ ವರ್ಷದ 8ನೇ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲ್ಪಡುವ ಸೈಕಲ್‌ಗಳ ಜೋಡಣೆ ಕಾರ್ಯ ಈಗಾಗಲೇ ಮುಗಿದಿದ್ದು, ವಿತರಣೆ ಮಾತ್ರ ಬಾಕಿ ಉಳಿದಿದೆ.ಪಟ್ಟಣ ಸೇರಿದಂತೆ ವಲಯದ ಗೋಟೂರ, ಸೂಗೂರ್, ರಾಜಾಪುರ, ಮಂಗಲಗಿ, ಕೊಡದೂರ ಮುಂತಾದ ಗ್ರಾಮಗಳ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳಿಗೆ ಹಂಚಿಕೆ ಮಾಡಲ್ಪಡುವ ಸುಮಾರು ಎರಡು ಸಾವಿರ ಸೈಕಲ್‌ಗಳು ಸಜ್ಜುಗೊಂಡಿವೆ.ಈ ಹಿಂದಿನ ವ್ಯವಸ್ಥೆಯಂತೆ ತಾಲ್ಲೂಕು ಕೇಂದ್ರ ಚಿತ್ತಾಪುರ ಬಹು ದೂರವಾಗುತ್ತದೆ ಎಂಬ ದೃಷ್ಟಿಯಿಂದ ಈ ವರ್ಷ ಕಾಳಗಿಯೇ ಕೇಂದ್ರಸ್ಥಾನವಾಗಿ ಮಾಡಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ಬಳಸಿಕೊಳ್ಳಲಾಗಿದೆ.ಅಂದಹಾಗೆ ಸೂಚಿತ ಅಂಗಳಕ್ಕೆ ಎರಡು ವಾರಗಳ ಹಿಂದೆ ಬಂದು ಬಿದ್ದ ಸೈಕಲ್‌ಗಳ ಬಿಡಿ ಭಾಗಗಳು ಮಧ್ಯಪ್ರದೇಶದ ಸುಮಾರು ಹನ್ನೆರಡು ಜನ ಯುವ ಕಾರ್ಮಿಕರ ಕೈಚಳಕದಲ್ಲಿ ವಿದ್ಯಾರ್ಥಿಗಳ ಸವಾರಿಗೆ ಅಂತಿಮ ಸ್ವರೂಪ ಪಡೆದಿವೆ.ಈ ಸೈಕಲ್‌ಗಳು ನಮ್ಮ ಕೈಗೆ ಯಾವಾಗ? ಎಂಬ ಕಾತುರ ದಿನವಿಡಿ ನೋಡುವ ಅರ್ಹ ವಿದ್ಯಾರ್ಥಿಗಳಲ್ಲಿ ಮನೆಮಾಡಿವೆ. ಮೊದಲೇ ವಿಸ್ತಾರ ಕಡಿಮೆ ಇದ್ದಿರುವ ಕಾಲೇಜು ಮೈದಾನ, ಅರ್ಧಭಾಗ ಸೈಕಲ್‌ಗಳಲ್ಲಿ ಮುಚ್ಚಿಹೋಗಿದೆ.ಅಷ್ಟರಲ್ಲಿಯೇ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈದಾನವೆಲ್ಲ ಕೆಸರಾಗಿ ರೂಪುಗೊಂಡಿದೆ. ಸಾಲಾಗಿ ನಿಲ್ಲಿಸಲಾದ ಸೈಕಲ್‌ಗಳ ಆಸುಪಾಸಿನಲ್ಲೆಲ್ಲ ನೀರು ನಿಂತುಕೊಂಡು ಎಲ್ಲೆಂದರಲ್ಲಿ ಗೊಜ್ಜೆ ಗೊಜ್ಜು ಸೃಷ್ಟಿಯಾಗಿದೆ.ಹೀಗಾಗಿ ಇಕ್ಕಟ್ಟಾದ ಮೈದಾನ ವಿದ್ಯಾರ್ಥಿಗಳ ಓಡಾಟ, ಪ್ರಾರ್ಥನೆ ಹಾಗೂ ಇತರೆ ಚಟುವಟಿಕೆಗಳಿಗೆ ಭಾರಿ ಅಡಚಣೆ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಟ್ಟಲ್ಲೇ ಇಟ್ಟಿರುವ ಸೈಕಲ್‌ಗಳು ತುಕ್ಕು ಹಿಡಿಯುತ್ತಿದದ್ದು ಕಂಡುಬರುತ್ತಿದೆ.ಇದನ್ನು ನೋಡಿದ ಬಹುತೇಕ ವಿದ್ಯಾರ್ಥಿಗಳು, ಇದೇನಪ್ಪ... ಒಂದುಕಡೆ ಕೆಸರು ಗೊಜ್ಜು, ಮತ್ತೊಂದಡೆ ತುಕ್ಕು... ಎಂದು ಪರಸ್ಪರ ಮಾತನಾಡುತ್ತಿರುವುದು ಕೇಳಿಬರುತ್ತಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಸೈಕಲ್‌ಗಳ ವಿತರಣೆ ಕಾರ್ಯ ಬೇಗನೆ ಕೈಗೊಳ್ಳುವರೇ ಎಂದು ಕಾದು ನೋಡಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry