ಮಂಗಳವಾರ, ಮೇ 11, 2021
27 °C

ಬಡ ಅಂಗವಿಕಲನಿಗೆ ಉಚಿತ ಟ್ರೈಸಿಕಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ ಫಲಶ್ರುತಿ

ಗುಲ್ಬರ್ಗ: ಸಂಚರಿಸಲು ಯಾವುದೇ ಸಾಧನವಿಲ್ಲದೆ, ಸರ್ಕಾರಿ ಮಾಸಾಶನವಿಲ್ಲದೆ ಕಷ್ಟಪಡುತ್ತಿದ್ದ ಗುಲ್ಬರ್ಗ ತಾಲ್ಲೂಕಿನ ಪಾಣೆಗಾಂವ ಗ್ರಾಮದ ರಮೇಶ ಎನ್ನುವ ಬಡ ಅಂಗವಿಕಲನಿಗೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶುಕ್ರವಾರ ಉಚಿತ ಟ್ರೈಸಿಕಲ್ ನೀಡಿದರು.ಹುಟ್ಟಿನಿಂದಲೂ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದ ರಮೇಶನ ಕುರಿತು `ಅಂಗವಿಕಲನ ಗೋಳು ಕೇಳುವರ‌್ಯಾರು?~ ಎನ್ನುವ ಶೀರ್ಷಿಕೆ ಅಡಿಯಲ್ಲಿ 25 ಆಗಸ್ಟ್ 2011ರಂದು `ಪ್ರಜಾವಾಣಿ~ಯಲ್ಲಿ ವಿಶೇಷ ವರದಿಯೊಂದು ಪ್ರಕಟವಾಗಿತ್ತು. ಮಾಸಾಶನ ಪಡೆಯಲು ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಕಳೆದರೂ ರಮೇಶನಿಗೆ ನ್ಯಾಯ ದೊರೆತಿಲ್ಲ ಎಂಬ ಈ ವರದಿಯನ್ನು ಆಧರಿಸಿ ಲೋಕಾಯುಕ್ತ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಹೇಶ್ವರಗೌಡ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದರು.`ಜಿಲ್ಲೆಯಲ್ಲಿ ಬೋಗಸ್ ಮಾಸಾಶನ ಪಡೆಯುವವರು 700 ಜನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲ ರೀತಿಯ ಮಾಸಾಶನಗಳನ್ನು ಫೆಬ್ರುವರಿಯಿಂದ ಸ್ಥಗಿತಗೊಳಿಸಿದೆ. ಮತ್ತೆ ಮಾಸಾಶನ ಆರಂಭವಾದ ಕೂಡಲೇ ರಮೇಶನಿಗೂ ಮಾಸಾಶನ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ರಾಜ್ಯ ನಿರ್ದೇಶಕ ಎಸ್.ಆರ್. ಜಮಾದಾರ ತಿಳಿಸಿದ್ದಾರೆ~ ಎಂದು ಮಹೇಶ್ವರಗೌಡ ವಿವರಿಸಿದರು.ಕನಿಷ್ಠ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಟ್ರೈಸಿಕಲ್ ದೊರಕಿಸಿಕೊಡುವುದರಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಯಶಸ್ವಿಯಾದರು.ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಉಚಿತ ಟ್ರೈಸಿಕಲ್ ದೊರೆತಿರುವುದಕ್ಕೆ ಅಂಗವಿಕಲ ರಮೇಶ ಸಂತೋಷ ವ್ಯಕ್ತಪಡಿಸಿದ್ದಾರೆ. `ಮನೆಯಿಂದ ಹೊರಗೆ ಬರಲು ಪಾಲಕರ/ಪೋಷಕರ ಬೆನ್ನೇರುವುದು ತಪ್ಪಿರಲಿಲ್ಲ. ಟ್ರೈಸಿಕಲ್‌ನಿಂದ ನನಗೆ ತುಂಬಾ ಸಹಾಯವಾಗಿದೆ~ ಎಂದು ಖುಷಿ ಹಂಚಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.