ಗುರುವಾರ , ಮೇ 13, 2021
35 °C

ವಾಡಿಯಲ್ಲಿ ಮುಂದುವರಿದ ಕಳ್ಳತನ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಪಟ್ಟಣದ ಶ್ರೀನಿವಾಸಗುಡಿ ವೃತ್ತದಲ್ಲಿರುವ ಜೈ ಶ್ರೀರಾಮ ಮೊಬೈಲ್ ಅಂಗಡಿ ಟಿನ್ ಮುರಿದು ಅಪಾರ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಹಣ ದೋಚಿಕೊಂಡು ಪರಾರಿಯಾದ ಘಟನೆ ಸೋಮವಾರ ನಡೆದಿದೆ.ರಾತ್ರಿ ಅಂಗಡಿಗೆ ನುಗ್ಗಿದ ದರಡೆಕೋರರು ಹಿಂಬದಿ ಟಿನ್ ಕತ್ತರಿಸಿ 10ಮೊಬೈಲ್ ಫೋನ್, ಒಂದು ಕಂಪ್ಯೂಟರ್, ಈಯರ್ ಫೋನ್ ಹಾಗೂ ಹಣ ದೊಚಿಕೊಂಡು ಪರಾರಿಯಾಗಿದ್ದಾರೆ. ಈ ಕರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಆರೋಪಿಗಳ ಶೋಧಕಾರ್ಯ ನಡೆದಿದೆ ಎಂದು ಠಾಣೆ ಸಬ್ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಳ್ ತಿಳಿಸಿದ್ದಾರೆ.ಪಟ್ಟಣದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನದಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಅಂಗಡಿಗಳ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಈಚೆಗೆ ಇಲ್ಲಿನ ಪರಮೇಶ್ವರಿ ವೈನ್ ಶಾಪ್ ಶಟರ್ ಮುರಿದು ಅಧಿಕ ಮೌಲ್ಯದ ಮದ್ಯ ಹಾಗೂ ಹಣ ದೋಚಿದ್ದರು. ಟಾಟಾ ಕಾಲೋನಿಯಲ್ಲಿ ಮನೆಯೊಂದಕ್ಕೆ ಕನ್ನಹಾಕಿ ಚಿನ್ನಾಭರಣ ಲೂಟಿ ಮಾಡಿದ್ದ ಘಟನೆ ಮರೆಯಾಗುವ ಮುನ್ನವೆ, ಪೊಲೀಸ್ ಠಾಣೆ ಪಕ್ಕದಲ್ಲಿಯೇ ಈ ಘಟನೆ ನಡೆದಿದ್ದು ಜನರಲ್ಲಿ ಮತ್ತಷ್ಟು ಆತಂಕ ಮೂಡಿದೆ.ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೋರತೆಯಿಂದ ಇಂಥ ಘಟನೆ ಮರುಕಳಿಸುತ್ತಿವೆ. ಆದ್ದರಿಂದ ವಾಡಿ ಠಾಣೆಗೆ ಹೆಚ್ಚಿನ ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಬೇಕು ಎಂದು ವಾಡಿ ಘಟಕದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಪಂಚಾಳ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.