ಮಂಗಳವಾರ, ಮೇ 11, 2021
20 °C

ಗಣೇಶ ಉತ್ಸವಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಅವಳಿ ಪಟ್ಟಣಗಳಾದ ಚಿಂಚೋಳಿ ಹಾಗೂ ಚಂದಾಪುರದಲ್ಲಿ ಗಣೇಶ ಉತ್ಸವ ಸಡಗರ ಸಂಭ್ರಮದಿಂದ ಸೋಮವಾರ ರಾತ್ರಿ ನಡೆಯಿತು.ವಿವಿಧೆಡೆ ಪ್ರತಿಷ್ಠಾಪಿಸಿದ್ದ ವಿನಾಯಕನ ವಿಗ್ರಹಗಳ ಮೆರವಣಿಗೆ, ವಿಸರ್ಜನೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಸುಲೇಪೇಟ ಖಟ್ವಾಂಗೇಶ್ವರ ವಿರಕ್ತ ಮಠದ ಗುರುಲಿಂಗ ಸ್ವಾಮಿಗಳು ಉದ್ಘಾಟಿಸಿದರು.ಕಡಗಂಚಿ ಸುಲೇಪೇಟ ಮಹಾಂತೇಶ್ವರ ಮಠದ ವೀರಭದ್ರ ಶಿವಾಚಾರ್ಯರು, ಕಾಳಗಿಯ ಶಿವಬಸವ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮರಾವ್ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಜಗಜೀವನರೆಡ್ಡಿ ಮಿರಿಯಾಣ, ಬಕ್ಕಪ್ಪ ಸೂಗೂರು, ಬಿಜೆಪಿ ಮುಖಂಡ ಗೌತಮ ವೈಜನಾಥ ಪಾಟೀಲ್, ಪ್ರಥಮ ದರ್ಜೆ ಗುತ್ತಿಗೆದಾರ ರಾಮರಾವ್ ಪಾಟೀಲ್ ಚಂದನಕೇರಾ, ಎಪಿಎಂಸಿ ಅಧ್ಯಕ್ಷ ರಘುನಾಥ ಠಾಕೂರು, ಶಿವರಾಯ ಮಕಾಸಿ, ಶಾಮರಾವ್ ಜಾನಕಿ, ಪ್ರದೀಪ ಮೇತ್ರಿ, ಡಾ. ಭೀಮರಾವ್ ಪವಾರ್, ಮುಕುಂದಪ್ಪ ಕಳಸ್ಕರ್, ನರಸಪ್ಪ ಬೀರಾಪೂರ, ಮಲ್ಲಿಕಾರ್ಜುನ ಪಂಚಾಳ್, ಗಣೇಶ ಮಹಾ ಮಂಡಳದ ಅಧ್ಯಕ್ಷ ವೀರಣ್ಣಾ ಬಬಲಾದಿ, ಡಿವೈಎಸ್ಪಿ ಬಾಲಚಂದ್ರ ದೊಡ್ಮನಿ ಇದ್ದರು.ಮಹಾ ಮಂಡಳದ ಗೌರವಾಧ್ಯಕ್ಷ ಹಾಗೂ ಶಾಸಕ ಸುನೀಲ ವಲ್ಯ್‌ಪುರ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಬಹುಮಾನ ನಗದು -11101 ರೂ. ವಾಹನ ಚಾಲಕರ ಸಂಘಕ್ಕೆ, ದ್ವಿತೀಯ ಬಹುಮಾನ ನಗದು -5501 ರೂ. ಹರಿಜನವಾಡಾದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮಂಡಳಿಗೆ ಹಾಗೂ ತೃತೀಯ ಬಹುಮಾನ ನಗದು ತಲಾ 2501 ರೂ. ಶ್ರೀರಾಮ ನಗರ ಗಣೇಶ ಮಂಡಳಿ ಮತ್ತು ಗಣೇಶ ಮಂದಿರದ ಗಣೇಶ ಮಂಡಳಿಗೆ ನೀಡಲಾಯಿತು.

ಉಳಿದಂತೆ ಪಟ್ಟಣದ 27 ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ನವ ಯುವಕ ಸಂಘಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಿದರು. ಮಧುಸೂದನ ಕಾಟಾಪೂರ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರು ನಿರೂಪಿಸಿದರು. ಸುಭಾಷ್ ಸೀಳಿನ್ ವಂದಿಸಿದರು. ನಂತರ ರಸ ಮಂಜರಿ ಕಾರ್ಯಕ್ರಮ ಜರುಗಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.