ಬುಧವಾರ, 2–4–1969

ಸೋಮವಾರ, ಏಪ್ರಿಲ್ 22, 2019
31 °C
ಬುಧವಾರ

ಬುಧವಾರ, 2–4–1969

Published:
Updated:

ತೆಲಂಗಾಣ: ಶಾಂತಿಭಂಗದ ವಿರುದ್ಧ ಉಗ್ರ ಎಚ್ಚರಿಕೆ– ರಾಜ್ಯ ವಿಭಜನೆಗೆ ಕೇಂದ್ರದ ನಕಾರ

ನವದೆಹಲಿ, ಏ. 1– ಶಾಂತಿ ಪಾಲನೆಗೆ ಬೆದರಿಕೆ ಒದಗಿದರೆ ಅದನ್ನು ಉಗ್ರಕ್ರಮಗಳಿಂದ ಎದುರಿಸಬೇಕೆಂದು ತೆಲಂಗಾಣ ಪರಿಸ್ಥಿತಿಯನ್ನು ಇಂದು ಚರ್ಚಿಸಿದ ಕೇಂದ್ರ ಸಂಪುಟದಲ್ಲಿ ಒಟ್ಟು ಅಭಿಪ್ರಾಯ ವ್ಯಕ್ತಪಟ್ಟಿತು.

ಆಂಧ್ರದ ವಿಭಜನೆ ಪ್ರಶ್ನೆಯೇ ಇಲ್ಲವೆಂದು ಗೃಹಸಚಿವ ಶ್ರೀ ಚವಾಣರು ನಿನ್ನೆ ಲೋಕಸಭೆಯಲ್ಲಿ ಹೇಳಿದುದನ್ನು ಸಭೆ ಅನುಮೋದಿಸಿತು. ತೆಲಂಗಾಣ ಜನತೆಗೆ ರಾಜ್ಯದ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದರೆಡ್ಡಿ ಹಾಗೂ ಪ್ರಧಾನಿ ನೀಡಿರುವ ಭರವಸೆಗಳನ್ನು ಪೂರ್ಣವಾಗಿ ಪಾಲಿಸಬೇಕೆಂದು ಸಭೆ ಅಭಿಪ್ರಾಯಪಟ್ಟಿತು.

ಸಂಸತ್ ಸಮಿತಿಯಿಂದ ಕುಂದುಕೊರತೆ ಅಧ್ಯಯನ: ಸಂಜೀವರೆಡ್ಡಿ ಸಲಹೆ

ನವದೆಹಲಿ, ಏ. 1– ಆಂಧ್ರಪ್ರದೇಶದಲ್ಲಿ ತೆಲಂಗಾಣಕ್ಕೆ ಸೇರಿದ ಜನರ ಕುಂದುಕೊರತೆಗಳ ಅಧ್ಯಯನಕ್ಕಾಗಿ ಪಾರ್ಲಿಮೆಂಟರಿ ಸಮಿತಿಯೊಂದನ್ನು ನೇಮಿಸಬೇಕೆಂಬ ಲೋಕಸಭೆ ಅಧ್ಯಕ್ಷ ಎನ್. ಸಂಜೀವರೆಡ್ಡಿ ಅವರ ಸಲಹೆಗೆ ಲೋಕಸಭೆಯಲ್ಲಿ ಇಂದು ಭಾರೀ ಬೆಂಬಲ ದೊರೆಯಿತು. ನಾಲ್ಕು ಗಂಟೆಗಳ ಕಾಲ ಸದನ ತೆಲಂಗಾಣ ಸಮಸ್ಯೆಯನ್ನು ವಿಶೇಷವಾಗಿ ಚರ್ಚಿಸಿತು.

ನದೀ ಜಲ ಪ್ರಶ್ನೆ ಇತ್ಯರ್ಥಕ್ಕೆ ಕೊನೆ ಯತ್ನ

ಬೆಂಗಳೂರು, ಏ. 1– ಕೃಷ್ಣಾ–ಗೋದಾವರಿ ನೀರು ಹಂಚಿಕೆ ಪ್ರಶ್ನೆಯನ್ನು ‘ಸಂಧಾನದ ಮೂಲಕ ಬಗೆಹರಿಸಲು ಮತ್ತೊಮ್ಮೆ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !