ಗುರುವಾರ, 24–4–1969

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಗುರುವಾರ

ಗುರುವಾರ, 24–4–1969

Published:
Updated:

ರಾಜ್ಯ ಯೋಜನೆ: 113 ಕೋಟಿ ರೂ. ಖೋತಾ

ಬೆಂಗಳೂರು, ಏ. 23– ಮೈಸೂರಿನ ನಾಲ್ಕನೇ ಯೋಜನೆಯಲ್ಲಿ ಯೋಜನಾ ಆಯೋಗ 113 ಕೋಟಿ ರೂ.ಗಳಷ್ಟು ಭಾರೀ ಖೋತಾ ಮಾಡಿದೆ. ಇದು ರಾಜ್ಯಕ್ಕೆ ಅತೀವ ನಿರಾಸೆ ಉಂಟು ಮಾಡಿದೆ.

440 ಕೋಟಿ ರೂ.ಗಳಿದ್ದ ಯೋಜನೆ ಈಗ 327 ಕೋಟಿಗಳಿಗೆ ಇಳಿದಿದೆ. ಲೋಕಸಭೆಯಲ್ಲಿ ಈ ವಾರ ಮಂಡಿಸಲಾದ ಕರಡು ಯೋಜನೆಯಲ್ಲಿ ತಲಾ ಆದಾಯ, ಈಗಾಗಲೇ ಕಾರ್ಯಗತ ಮಾಡಲು ಒಪ್ಪಲಾದ ಯೋಜನೆಗಳು ಹಾಗೂ ಎದುರಿಸಬೇಕಾದ ವಿಶೇಷ ಸಮಸ್ಯೆಗಳನ್ನು ಪರಿಗಣಿಸಿ ಈ ಗಾತ್ರ ಗೊತ್ತುಪಡಿಸಲಾಗಿದೆ.

ಅಸ್ಪೃಶ್ಯತೆ ನಿವಾರಣೆಗೆ ಕರಣ್‌ ಸೂತ್ರ

ನವದೆಹಲಿ, ಏ. 23– ಫರೀದಾಬಾದ್ ಕಾಂಗ್ರೆಸ್ ಅಧಿವೇಶನದ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಮಾಡುವಾಗ, ಅಡುಗೆ ಕಾರ್ಯದಲ್ಲಿ ಹರಿಜನರೂ ಭಾಗವಹಿಸಬೇಕೆಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಡಾ. ಕರಣ್‌ಸಿಂಗ್ ಸಲಹೆ ಮಾಡಿದ್ದಾರೆ.

ಆಸ್ಪೃಶ್ಯತೆ ಪಿಡುಗನ್ನು ಎಂದೆಂದಿಗೂ ಮೂಲೋತ್ಪಾಟನೆಗೊಳಿಸುವ ನಮ್ಮ ನಿರ್ಧಾರದ ಪುನರ್ ಸ್ಪಷ್ಟನೆಗೆ ಅಧಿವೇಶನದಲ್ಲಿ ಅವಕಾಶವಿರಬೇಕೆಂದು ಭಾವಿಸುವುದಾಗಿ ಡಾ. ಕರಣ್‌ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !