ಭಾನುವಾರ, 8–6–1969

ಮಂಗಳವಾರ, ಜೂನ್ 18, 2019
24 °C
ಭಾನುವಾರ

ಭಾನುವಾರ, 8–6–1969

Published:
Updated:

ತೆಲಂಗಾಣ ಪ್ರಶ್ನೆಯ ಎಲ್ಲ ಅಂಶ ಚರ್ಚೆ ಸಾಧ್ಯ- ಚವಾಣ್‌ ಸಲಹೆ

ಹೈದರಾಬಾದ್, ಜೂನ್ 7– ತೆಲಂಗಾಣ ಪ್ರಜಾ ಸಮಿತಿಯು ಪ್ರತ್ಯೇಕ ತೆಲಂಗಾಣ ರಚನೆಗೆ ನಡೆಸುತ್ತಿರುವ ಚಳವಳಿಯನ್ನು ನಿಲ್ಲಿಸಿ ‘ಸೂಕ್ತ ವಾತಾವರಣ’ ಕಲ್ಪಿಸಿದರೆ ಸಮಸ್ಯೆಯ ಎಲ್ಲ ಅಂಶಗಳನ್ನೂ ಚರ್ಚಿಸಬಹುದು ಎಂದು ಕೇಂದ್ರ ಗೃಹ ಸಚಿವ ವೈ.ಬಿ. ಚವಾಣರು ಇಂದು ಪ್ರಜಾಸಮಿತಿ ನಾಯಕರಿಗೆ ತಿಳಿಸಿದರು.

ಕೇಂದ್ರದ ಧೋರಣೆಯಲ್ಲಿ ಗಮನಾರ್ಹವಾದ ಬದಲಾವಣೆಯನ್ನು ಚವಾಣರ ಸೂಚನೆಯಲ್ಲಿ ಪ್ರಜಾಸಮಿತಿ ನಾಯಕರು ಗುರುತಿಸಿದರು.

ತೆಲಂಗಾಣ ಪ್ರಜಾಸಮಿತಿಯ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಎಂ. ಚೆನ್ನಾರೆಡ್ಡಿಯವರೊಡನೆ ಚವಾಣರು ಇಂದು ನಾಲ್ಕು ಗಂಟೆ ಕಾಲ ಮಾತುಕತೆ ನಡೆಸಿದರು.

ಕಿರ್ಲೋಸ್ಕರ್ ಸ್ಟ್ಯಾಂಪ್

ನವದೆಹಲಿ, ಜೂನ್ 7– ಕೈಗಾರಿಕೋದ್ಯಮಿ, ರಾಷ್ಟ್ರಭಕ್ತ ಮತ್ತು ಸಮಾಜ ಸುಧಾರಕ ಲಕ್ಷ್ಮಣರಾವ್ ಕಾಶೀನಾಥ್ ಕಿರ್ಲೋಸ್ಕರ್‌
ಅವರ ನೆನಪಿನಲ್ಲಿ ಜೂನ್‌ 20ರಂದು 20 ಪೈಸೆಯ ಅಂಚೆ ಚೀಟಿಯೊಂದನ್ನು ಅಂಚೆ ಮತ್ತು ತಂತಿ ಇಲಾಖೆ ಪ್ರಕಟಿಸಲಿದೆ.

ಸಂಗೀತ ವಿದ್ವಾಂಸ ಚಿಂತಲಪಲ್ಲಿ ವೆಂಕಟರಾವ್ ಅವರ ನಿಧನ

ಬೆಂಗಳೂರು, ಜೂನ್ 7– ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸ, ಸಂಗೀತ ರತ್ನ ಶ್ರೀ ಚಿಂತಲಪಲ್ಲಿ ವೆಂಕಟರಾ‌ವ್ ಅವರು ನಿನ್ನೆ ಸ್ವಗ್ರಾಮವಾದ ಹುಣಸೇನಹಳ್ಳಿಯಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಮೈಸೂರಿನ ಮಹಾರಾಜರಿಂದ ‘ಸಂಗೀತ ರತ್ನ’ ಎಂಬ ಬಿರುದು ಪಡೆದಿದ್ದರು. ಮೈಸೂರು ಸಂಗೀತ ನಾಟಕ ಅಕಾಡೆಮಿ ಮತ್ತು ಆಂಧ್ರ ಸಂಗೀತ ಅಕಾಡೆಮಿಗಳು ಸಂಗೀತ ಕ್ಷೇತ್ರದಲ್ಲಿ ಇವರ ಸೇವೆಗಾಗಿ ಗೌರವಿಸಿ ಸನ್ಮಾನಿಸಿದ್ದವು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು 1968ರಲ್ಲಿ ಇವರಿಗೆ ನೀಡಲಾಗಿತ್ತು. ಮೈಸೂರಿನಲ್ಲಿ ನಡೆದ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು.

ಖ್ಯಾತ ಸಂಗೀತಗಾರ ಚಿಂತಲಪಲ್ಲಿ ರಾಮಚಂದ್ರರಾವ್ ಅವರು ಶ್ರೀಯುತರ ಪುತ್ರರಲ್ಲಿ ಒಬ್ಬರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !