ಮಂಗಳವಾರ, ಮೇ 18, 2021
22 °C

ಹೈಕ ಮಾದರಿ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಬೀದರ್ ಜಿಲ್ಲೆ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮಾದರಿ ಆಗಬೇಕು ಎಂಬ ಉದ್ದೇಶ ನಮ್ಮದು. ಆ ನಿಟ್ಟಿನಲ್ಲಿ ಪಕ್ಷಾತೀತ, ಪ್ರಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ತಿಳಿಸಿದರು. ಇಲ್ಲಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜನಲ್ಲಿ ಸೋಮವಾರ ಏರ್ಪಡಿಸಿದ್ದ ಪದವಿಪೂರ್ವ ವಿಭಾಗದ ನೂತನ ಪ್ರಯೋಗಾಲಯ ಹಾಗೂ ಗೃಂಥಾಲಯ ಕಟ್ಟಡ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.ಪ್ರಪಂಚದಲ್ಲಿ ಗುರುವಿಗೆ ಸಮನಾದ ಸ್ಥಾನ ಇನ್ನೊಂದಿಲ್ಲ. ವಿದ್ಯಾ ಗುರುವಿಂದ ಉತ್ತಮ ಮಾರ್ಗದರ್ಶನ ಪಡೆದು, ಸರ್ಕಾರದ ವಿವಿಧ ಸೌಕರ್ಯಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯದ ಬೇರೆ ಜಿಲ್ಲೆ ವಿದ್ಯಾರ್ಥಿಗಳಂತೆ ಈ ಭಾಗದ ವಿದ್ಯಾರ್ಥಿಗಳು ಕೆ.ಎ.ಎಸ್. ಐ.ಎ.ಎಸ್‌ನಂಥ ಉನ್ನತ ಹುದ್ದೆ ಪಡೆಯಲು ಸಲಹೆ ನೀಡಿದರು.ಈವರೆಗೆ 4ಬಾರಿ ಕ್ಯಾಬಿನೇಟ್ ದರ್ಜೆ ಸಚಿವನಾಗಿ ಸೇವೆ ಸಲ್ಲಿಸಿದೇನೆ. ಆದರೆ, ಅನೇಕ ಬಾರಿ ವಿವಿಧ ಶಾಲೆಗಳಿಗೆ ಆಕಿಸ್ಮಿಕ ಭೇಟಿ ನೀಡಲು ಹೋದ ಸಂದರ್ಭದಲ್ಲಿ ತಪ್ಪಿಯೂ ಮುಖ್ಯಗುರು ಕುರ್ಚಿ ಮೇಲೆ ಕುಳಿತುತಿಲ್ಲ ಎಂದು ತಿಳಿಸಿದರು. ವಿವಿಧ ಬೇಡಿಕೆ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನಿಸುವುದಾಗಿ ಸಚಿವ ಬೆಳಮಗಿ ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಶೇಖರ ಪಾಟೀಲ ಹಳೆ ಕಟ್ಟಡ ನೆಲಸಮಗೊಳಿಸಿ, ಹೊಸದಾಗಿ ಕಟ್ಟಡ ನಿರ್ಮಿಸುವುದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇದ್ದು, ಆ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ತಿಳಿಸಿದರು. 80ರ ಹರೆಯದ ಸಚಿವ ರೇವುನಾಯಕ ಬೆಳಮಗಿ ಅವರು `ಕುಸ್ತಿಯಲ್ಲಿ ಗೈದ ಸಾಧನೆ ತಾವು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಮತ್ತು ಯುವ ಪೀಳಿಗೆಗೆ ಮಾದರಿ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಬಿ.ಎಸ್.ಎಸ್.ಕೆ ಅಧ್ಯಕ್ಷ ಸುಭಾಷ ಕಲ್ಲೂರ, ಪುರಸಭೆಯ ಅಧ್ಯಕ್ಷೆ ಪದ್ಮಾವತಿ ಶಿವಾಜಿರಾವ ಮಚಕೂರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗಜೇಂದ್ರ ಕನಕಟಕರ್, ಶಿರಾಜುದ್ದೀನ್, ಪದವಿಪೂರ್ವ ಕಾಲೇಜು ಉಪನಿರ್ದೇಶಕ ಯಲ್ಲಪ್ಪ ದಶವಂತರ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ, ಪುಸಭೆಯ ಸದಸ್ಯ ವಿನಾಯಕ ಯಾದವ್, ಬಬನರಾವ ಬಿರಾದಾರ, ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಕೆ.ಎಂ.ಮುಗಳಿ, ರಾಮಚಂದ್ರ ಡಿ.ಕುಶೆ, ಪ್ರೌಢಶಾಲೆ ಉಪಪ್ರಾಚಾರ್ಯ ಡಿ.ಶಂಕರರಾವ ಮೊದಲಾದವರು ಇದ್ದರು.ತುಳಜಾರಾಮ ಗಾಯದನಕರ್ ಸ್ವಾಗತಿಸಿದರು. ಪ್ರಾಚಾರ್ಯ ವೈ.ಆರ್.ನಂದಿಹಳ್ಳಿ ಪ್ರಾಸ್ತಾವಿಕ ಮಾನಾಡಿದರು.ಜನಲಸಂಗವಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹೇಳಿದರು. ಪೊ. ಡಿ.ಅಜೇಂದ್ರಸ್ವಾಮಿ ನಿರೂಪಿಸಿದರು. ಪಂಢರಿ ಹುಗ್ಗಿವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.