ಶನಿವಾರ, 17–8–1968

7

ಶನಿವಾರ, 17–8–1968

Published:
Updated:

ಸಮರತ್ಯಾಗ ಒಪ್ಪಂದ– ಏಕೈಕ ಶ್ರೇಯಸ್ಕರ ಪಥ: ಪಾಕಿಸ್ತಾನಕ್ಕೆ ಪ್ರಧಾನಿ ಇಂದಿರಾ ಸೂಚನೆ
ನವದೆಹಲಿ, ಆ. 16–
ಸಮರತ್ಯಾಗ ಒಪ್ಪಂದವಾದಾಗ ಮಾತ್ರವೇ ಉಭಯರಾಷ್ಟ್ರಗಳೂ ತಮ್ಮತಮ್ಮ ಆಂತರಿಕ ಸಮಸ್ಯೆಗಳ ಕಡೆಗೆ ಅವಿಚಲಿತ ಗಮನಹರಿಸಿ ಶ್ರೇಯಸ್ಸು ಸಾಧಿಸಬಹುದಾದ್ದರಿಂದ ಆ ಬಗೆಗಿನ ಭಾರತದ ಸೂಚನೆಯನ್ನು ಪುನರಾಲೋಚಿಸುವಂತೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದಾರೆ.

21ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಐತಿಹಾಸಿಕ ಕೆಂಪುಕೋಟೆಯಿಂದ ಶ್ರೀಮತಿ ಗಾಂಧಿಯವರು ನಿನ್ನೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತ ಭಾರತ ಧೈರ್ಯಸ್ಥೈರ್ಯಗಳ ನಾಡು. ಯಾರ ಒತ್ತಾಯಕ್ಕೂ ಅದು ಮಣಿಯದು ಎಂದರು.

ಹೌಸ್‌ ಸರ್ಜನ್‌ಗಳ ಮಾಸಿಕ ಭತ್ಯ: 150 ರೂ
ಬೆಂಗಳೂರು, ಆ. 16–
ಹೌಸ್‌ ಸರ್ಜನ್‌ಗಳ ಮಾಸಿಕ ಭತ್ಯವನ್ನು  ನೂರು ರೂಪಾಯಿಗಳಿಂದ ನೂರೈವತ್ತಕ್ಕೆ ಏರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !