ಭಾನುವಾರ, 8–12–1968

7

ಭಾನುವಾರ, 8–12–1968

Published:
Updated:

ಬಳಕೆ ವಸ್ತುಗಳ ತಯಾರಿಕೆಗೆ ಗುರಿ ನಿರ್ಧಾರ ಬೇಡ: ಯೋಜನಾ ಮಂಡಳಿ ಅಭಿಪ್ರಾಯ

ಬೆಂಗಳೂರು, ಡಿ. 7– ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಖಾಸಗಿ ಕ್ಷೇತ್ರದ ಕೈಗಾರಿಕೆಗಳಿಗೆ ಅದರಲ್ಲಿಯೂ ಬಳಕೆ ವಸ್ತುಗಳ ತಯಾರಿಕೆಗೆ ಗುರಿಯನ್ನು ಗೊತ್ತು ಮಾಡಬಾರದೆಂಬುದು ಯೋಜನಾ ಆಯೋಗದ ಅಭಿಪ್ರಾಯವಾಗಿದೆಯೆಂದು ಆಯೋಗದ ಸದಸ್ಯ ಶ್ರೀ ಆರ್. ವೆಂಕಟರಾಮನ್ ಅವರು ಇಂದು ಇಲ್ಲಿ ತಿಳಿಸಿದರು.

ಆಯೋಗವು ಉತ್ಪನ್ನದ ಗುರಿಯನ್ನು ನಿರ್ಧರಿಸಿದರೆ  ಅದೇ ದೇಶದ ಬೇಡಿಕೆಯೆಂದು ಪರಿಗಣಿಸಿ ತಾವು ಆ ಕೈಗಾರಿಕೆಗಳನ್ನು ವಿಸ್ತರಿಸಲು ಸಾಧ್ಯವಾಗಲಿಲ್ಲವೆಂದು ಖಾಸಗಿ ಉದ್ಯಮಿಗಳು ಆಯೋಗವನ್ನು ಆಕ್ಷೇಪಿಸಬಹುದೆಂದೂ ಆದುದರಿಂದ ಗುರಿಯನ್ನು ನಿರ್ಧರಿಸಬಾರದೆಂದು ಆಯೋಗ ಆಲೋಚಿಸುತ್ತಿದೆಯೆಂದೂ ತಿಳಿಸಿದರು.

ಕುದುರೆಮುಖ ಬೃಹತ್ ಅದುರು ಯೋಜನೆ ಆರಂಭ

ಚಿಕ್ಕಮಗಳೂರು, ಡಿ. 7– ರಾಷ್ಟ್ರದಲ್ಲೇ ಅತ್ಯಧಿಕ ವಿದೇಶಿ ವಿನಿಮಯ ಗಳಿಸಿಕೊಡಬಲ್ಲ ಕುದುರೆಮುಖ ಕಬ್ಬಿಣದ ಅದುರು ತೆಗೆಯುವ ಪೈಲಟ್ ಯೋಜನೆಯನ್ನು ಇಂದು ಬೆಳಿಗ್ಗೆ ಉದ್ಘಾಟಿಸಿದ ಕೇಂದ್ರ ಸರ್ಕಾರದ ಉಕ್ಕು ಗಣಿ ಶಾಖೆ ಉಪಮಂತ್ರಿ ಚೌಧುರಿ ರಾಮಸೇವಕ್ ಅವರು ಈ ಯೋಜನೆಯು ವಿಶ್ವದ ಭಾರಿ ಯಾಂತ್ರೀಕೃತ ಗಣಿಗಳಲ್ಲೊಂದಾಗುವುದೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯದ ಕೈಗಾರಿಕಾ ಮಂತ್ರಿ ಶ್ರೀ ರಾಜಶೇಖರ ಮೂರ್ತಿ ಅವರು ವಿಜ್ಞಾನ ಮತ್ತು ತಾಂತ್ರಿಕ ಬೆಳವಣಿಗೆಗಾಗಿ ವಿದೇಶೀ ನಿಪುಣರ ಸಲಹೆ ಅನಿವಾರ್ಯ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !