ಗುರುವಾರ , ಮೇ 19, 2022
20 °C

ಅಪಾಯ ಆಹ್ವಾನಿಸುವ ಹೊಸಳ್ಳಿರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಕಳೆದ ಎರಡು ವರ್ಷಗಳ ಹಿಂದಷ್ಟೆ ನಿರ್ಮಿಸಿದ್ದ ಹೊಸಳ್ಳಿ(ಎಚ್) ರಾಜಾಪೂರ ಮಾರ್ಗದ ರಸ್ತೆ ಹೊಸಳ್ಳಿಯಿಂದ ಒಂದುವರೆ ಕೀ.ಮೀ ಅಂತರದಲ್ಲಿ ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ರಸ್ತೆ ಮೇಲಿನ ಪಯಣ ಹಗ್ಗದ ಮೇಲಿನ ನಡಿಗೆಯಂತಾಗಿದೆ.ಕಾಳಗಿ, ರಾಜಾಪೂರ, ಭರತನೂರು, ಮುಂತಾದ ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಈ ರಸ್ತೆ ಹಾಳಾಗಿ ಒಂದುವರೆ ತಿಂಗಳು ಕಳೆದರು ಯಾವೊಬ್ಬ ಅಧಿಕಾರಿ ಈ ಕಡೆ ತಿರುಗಿ ನೋಡಿಲ್ಲ ಎಂದು ಹೊಸಳ್ಳಿ ಗ್ರಾಮಸ್ಥರು ದೂರಿದ್ದರು.ಜೀಪ್, ಟ್ರ್ಯಾಕ್ಟರ್, ಲಾರಿ, ಎತ್ತಿನ ಗಾಡಿ, ಬೈಕ್ ಮುಂತಾದ ವಾಹನಗಳು ಓಡಾಡುವ  ಈ ರಸ್ತೆಯ ಅಕ್ಕ ಪಕ್ಕದಲ್ಲಿ ರಕ್ಷಣಾ ಭಾಗ ಕುಸಿದು ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಸಂಚಾರದ ವೇಳೆಯಲ್ಲಿ ಜಾಗೃತಿ ತಪ್ಪಿದ್ದರೆ ಅಪಾಯ ತಪ್ಪಿದಲ್ಲ ಎಂದು ದೂರಿದರು.ಅಗತ್ಯ ಸಾಮಗ್ರಿ ಖರೀದಿಗೆ ಕಾಳಗಿಗೆ ಹೋಗುವ ಹೊಸಳ್ಳಿ, ಹಲಚೇರಾ, ಸುತ್ತಮುತ್ತಲಿನ ರಸ್ತೆ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತವಾಗುತ್ತದೆ ಎಂಬ ಆತಂಕದಲ್ಲಿದ್ದಾರೆ.ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ರಸ್ತೆಗೆ ಮುರುಮ್ ಭರ್ತಿ ಮಾಡಿ ಕಲ್ಲಿನಿಂದ ಪಿಚ್ಚಿಂಗ್ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೊಸಳ್ಳಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.