ಭಾನುವಾರ, ಜೂನ್ 7, 2020
24 °C

ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ

ವಾಡಿ: ವಿಜಯದಶಮಿ ದಿನದಂದು ಪಟ್ಟಣದ ರೈಲ್ವೆ ಕಾಲೊನಿ ಗಣೇಶ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ದೇವಿ ದರ್ಶನ ಪಡೆದು, ಪ್ರತಿಯೊಬ್ಬರು ಬನ್ನಿ ಕೊಡುವ ಮೂಲಕ ಪರಸ್ಪರ ಸಿಹಿ ಹಂಚಿ ಶುಭಾಶಯ ಕೋರುವ ಮೂಲಕ ನವರಾತ್ರಿ ಉತ್ಸವಕ್ಕೆ ತೆರೆ ಬಿತ್ತು.ಪಟ್ಟಣದ ರೈಲ್ವೆ ಕಾಲೊನಿ, ಮರಾಠಿ ಗಲ್ಲಿ ಹಾಗೂ ಎಸಿಸಿ ಕಾಲೋನಿಯಲ್ಲಿ ನಾಡಹಬ್ಬ ನವರಾತ್ರಿ ನಿಮಿತ್ಯ ಪ್ರತಿಷ್ಠಾಪಿಸಿದ ದೇವಿ ಮೂರ್ತಿಗೆ ಒಂಬತ್ತು ದಿನಗಳವರೆಗೆ ವಿಶೇಷ ಪೂಜೆ ನಡೆಸಲಾಯಿತು. ಶಾಸಕ ವಾಲ್ಮೀಕ ನಾಯಕ ನವರಾತ್ರಿ ಉತ್ಸವದ ರಾತ್ರಿ ದೀಪವನ್ನು ಬಾನಂಗಳಕ್ಕೆ ಹಾರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಕಿವಿಗಡಚ್ಕಿುವ ಪಟಾಕಿಗಳು ನೋಡುಗರ ಗಮನ ಸೆಳೆದವು.ರಾತ್ರಿ 9.30ಕ್ಕೆ ದೇವಿ ಅಂಬಾಭವಾನಿ ದೇವಸ್ಥಾನದ ಎದುರಿಗೆ ರಾವಣನ ಬ್ರಹತ್ ಪ್ರತಿಕೃತಿಯನ್ನು ದಹಿಸಲಾಯಿತು.ತಾಯಪ್ಪಾ ಮೇಕಲ್, ಎಸಿಸಿ ಕಂಪೆನಿ ಅಧಿಕಾರಿ ಬಿ.ಡಿ.ದಲೇರ್, ಹರಿ ಗಲಾಂಡೆ, ರಾಜೇಶ ಕಾಂಬಳೆ ಹಾಗೂ ಜೈಭವಾನಿ ತರುಣ ಸಂಘದ ಪದಾಧಿಕಾರಿಗಳು ಉತ್ಸವದ ನೇತೃತ್ವ ವಹಿಸಿದ್ದರು. ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.