ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆ ನೀಡಿ : ನವೀನ್ ಪಟ್ನಾಯಿಕ್ ಪತ್ರ

7
ಮೋದಿಗೆ ಪತ್ರ

ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆ ನೀಡಿ : ನವೀನ್ ಪಟ್ನಾಯಿಕ್ ಪತ್ರ

Published:
Updated:
ಹಾಕಿ

ನವದೆಹಲಿ: ಹಾಕಿಗೆ ರಾಷ್ಟ್ರೀಯ ಕ್ರೀಡೆ ಎಂಬ ಮಾನ್ಯತೆ ನೀಡಿ ಎಂದು ಒತ್ತಾಯಿಸಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ನಿಮಗೆ ತಿಳಿದಿರುವಂತೆ ಮುಂದಿನ ವಿಶ್ವಕಪ್ ಹಾಕಿ ಪಂದ್ಯ ನವೆಂಬರ್ ತಿಂಗಳಿನಲ್ಲಿ ಒಡಿಶಾದಲ್ಲಿ ನಡೆಯಲಿದೆ. ಇದರ ಪೂರ್ವತಯಾರಿ ಬಗ್ಗೆ ಪರಿಶೀಲಿಸುತ್ತಿರುವಾಗ ನನಗೆ ತಿಳಿದು ಬಂದ ವಿಷಯ ಏನೆಂದರೆ ಹಾಕಿ ರಾಷ್ಟ್ರೀಯ ಕ್ರೀಡೆ ಎಂದು ಜನಪ್ರಿಯವಾಗಿದ್ದರೂ, ಇದನ್ನು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂಬುದು.

ಹಾಗಾಗಿ ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಅಧಿಕೃತ ಅಂಗೀಕಾರ ನೀಡಿ. ಈ ಮೂಲಕ ದೇಶದ ಹೆಮ್ಮೆಗೆ ಕಾರಣರಾದ ಹಾಕಿ ಆಟಗಾರರಿಗೆ ಮನ್ನಣೆ ನೀಡಿದಂತಾಗುತ್ತದೆ ಎಂದು ಪಟ್ನಾಯಿಕ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ 10 ವರ್ಷದ ಐಶ್ವರ್ಯಾ ಎಂಬ ಬಾಲಕಿ ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯೇ? ಎಂದು ಆರ್‍‍ಟಿಐ ಮೂಲಕ ಪ್ರಶ್ನೆ ಕೇಳಿದ್ದಳು. ಇದಕ್ಕೆ ಉತ್ತರಿಸಿದ ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯ ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಅಧಿಕೃತವಾಗಿ ಪರಿಗಣಿಸಿಲ್ಲ ಎಂದು ಉತ್ತರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !