7

ಯಾರಿಗೆ ಕಾಮಿಡಿ ಕಿಲಾಡಿ ಪಟ್ಟ?

Published:
Updated:
‘ಕಾಮಿಡಿ ಕಿಲಾಡಿಗಳು ಸೀಸನ್‌ 2’ ಸ್ಪರ್ಧೆಯ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು

‘ಕಾಮಿಡಿ ಕಿಲಾಡಿಗಳು’ ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ. ಅತಿಹೆಚ್ಚು ಜನಮನ್ನಣೆಗಳಿಸಿದ ‘ಕಾಮಿಡಿ ಕಿಲಾಡಿಗಳು  ಸೀಸನ್ 2’ ಫಿನಾಲೆ ಕಾರ್ಯಕ್ರಮ ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂಟ್ರಿ ಡಾನ್ಸ್ಮೂ ಲಕ ನಿರೂಪಕ ಮಾಸ್ಟರ್ ಆನಂದ್, ತೀರ್ಪುಗಾರರಾದ ನಟ ಜಗ್ಗೇಶ್, ನಟಿ ರಕ್ಷಿತಾ ಹಾಗೂ ನಿರ್ದೇಶಕ ಯೋಗರಾಜ್ ಭಟ್‍ ಜನರನ್ನು ರಂಜಿಸಿದರು. ಸೀಸನ್ 2 ಪ್ರಯಾಣ ಮತ್ತು ಕಿಲಾಡಿಗಳ ಪ್ರತಿಭೆ ಬಗ್ಗೆ ತೀರ್ಪುಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಪರ್ಧಿಗಳು ತಾವು ಸಾಗಿಬಂದ ಹಾದಿ, ಅನುಭವ ಹಂಚಿಕೊಂಡರು.

ಫಿನಾಲೆಗೆಂದೇ ಸಜ್ಜುಗೊಂಡಿದ್ದ ‘ಪುಂಗಿನಾದ’, ‘ವಾಯ್ಸ್ ಪ್ರಾಬ್ಲಮ್’ ಮತ್ತು, ‘ದಿ ವಿಲನ್’ ಸ್ಕಿಟ್‌ಗಳ ಮೂಲಕ ಸ್ಪರ್ಧಿಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ವೃತ್ತಿ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರು ಬರೆದು ನಿರ್ದೇಶಿಸಿದ ‘ಕಲಿಯುಗದ ಕುಡುಕ’ ನಾಟಕವನ್ನು ಸ್ಪರ್ಧಿಗಳು ಅಭಿನಯಿಸಿದ್ದು ವಿಶೇಷವಾಗಿತ್ತು.

ರಾಜು ತಾಳಿಕೋಟೆ ಅವರು ತಮ್ಮ ಮ್ಯಾನರಿಸಂ ಹಾಗೂ ಪಂಚಿಂಗ್‌ ಡೈಲಾಗ್‌ಗಳ ಮೂಲಕ ಜನರನ್ನು ರಂಜಿಸಿದರು. ಜಗ್ಗೇಶ್ ಅವರೊಂದಿಗೆ ಮಾತಿನ ಜುಗಲ್‌ಬಂದಿಗೂ ಇಳಿದು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು. ‘ಪಂಚತಂತ್ರ’ ಚಿತ್ರದ ನಾಯಕ ವಿಹಾನ್ ಪ್ರದರ್ಶಿಸಿದ ಡಾನ್ಸ್‌ ಮನ ಸೆಳೆಯಿತು. 

‘ಕಾಮಿಡಿ ಕಿಲಾಡಿಗಳು ಸೀಸನ್ 2’ ವಿನ್ನರ್‌ ಯಾರು ಎಂಬ ಕುತೂಹಲದ ಪ್ರಶ್ನೆಗೆ ಜೂನ್‌ 24ರ ಭಾನುವಾರ ಸಂಜೆ 6ಕ್ಕೆ ಪ್ರಸಾರವಾಗುವ ಗ್ರ್ಯಾಂಡ್ ಫಿನಾಲೆಯಲ್ಲಿ ಉತ್ತರ ಸಿಗಲಿದೆ.

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !