ಹಾಲಿವುಡ್‌ಗೆ ಹಾರಿದ ಜಾಕ್ವೆಲಿನ್

7

ಹಾಲಿವುಡ್‌ಗೆ ಹಾರಿದ ಜಾಕ್ವೆಲಿನ್

Published:
Updated:
Indian Bollywood actress Jacqueline Fernandez attends the politician Baba Siddique’s Annual Iftar party in Mumbai on June 10, 2018. / AFP PHOTO / Sujit Jaiswal

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಜಾಗತಿಕ ಮನ್ನಣೆ ಗಳಿಸಿದ ನಟಿ ಪ್ರಿಯಾಂಕ ಚೋಪ್ರಾ ಅವರ ಹಾದಿಯಲ್ಲಿದ್ದಾರೆ ಮತ್ತೊಬ್ಬ ನಟಿ ಜಾಕ್ವೆಲಿನ್ ಫರ್ನಾಂಡಿಸ್‌.

ಈಗಷ್ಟೇ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿರುವ ಶ್ರೀಲಂಕಾದ ಈ ಚೆಲುವೆ, ಹಾಲಿವುಡ್‌ಗೆ ಹಾರಿ ಹಲವರ ಹುಬ್ಬೇರಿಸಿದ್ದಾರೆ. ನಿರ್ದೇಶಕ ಜೇಮ್ಸ್ ಸಿಂಪ್‌ಸನ್ ನಿರ್ದೇಶನದ ‘ಡೆಫಿನೀಷನ್ ಆಫ್ ಫಿಯರ್’ ಅನ್ನುವ ಪಕ್ಕಾ ಹಾರರ್ ಸಿನಿಮಾದಲ್ಲಿ ಜಾಕ್ವೆಲಿನ್ ನಟಿಸಿದ್ದು, ಈಗಾಗಲೇ ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ.

ವಾರಾಂತ್ಯದ ಮೋಜಿಗಾಗಿ ನಾಲ್ವರು ಗೆತಿಯರು ದೊಡ್ಡ ಬಂಗಲೆಗೆ ಹೋದಾಗ ಅಲ್ಲಿ ನಡೆಯುವ ಚಿತ್ರವಿಚಿತ್ರ ಘಟನೆಗಳೇ ಚಿತ್ರದ ಕಥಾ ವಸ್ತು. ಈ ಗೆಳತಿಯರು ಸ್ಪಿರಿಟ್ ಮೂಲಕ ದೆವ್ವವನ್ನು ಆಹ್ವಾನಿಸುವ ಕಥೆಯನ್ನು ‘ಡೆಫಿನೀಷನ್ ಆಫ್ ಫಿಯರ್’ ಹೊಂದಿದ್ದು, ಟ್ರೇಲರ್ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತದೆ.

ಗ್ರಾಫಿಕ್ಸ್ ತಂತ್ರಜ್ಞಾನದ ಜತೆಗೆ ಗಟ್ಟಿ ಕಥಾತಿರುಳನ್ನು ಹೊಂದಿರುವ ಈ ಚಿತ್ರದ ನಾಲ್ವರು ನಾಯಕಿಯರಲ್ಲಿ ಜಾಕ್ವೆಲಿನ್ ಕೂಡಾ ಒಬ್ಬರು. ಇತ್ತೀಚೆಗಷ್ಟೇ ‘ರೇಸ್ 3’ ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ಜೋಡಿಯಾಗಿ ನಟಿಸಿದ್ದ ಜಾಕ್ವೆಲಿನ್ ಉತ್ತಮ ನೃತ್ಯಗಾರ್ತಿಯೂ ಹೌದು. ಮಾಧುರಿ ದೀಕ್ಷಿತ್ ಅವರ ‘ಏಕ್ ದೋ ತೀನ್’ ಹಾಡಿನ ರಿಮೇಕ್‌ನಲ್ಲೂ ಹೆಜ್ಜೆ ಹಾಕಿದ್ದರು. ಹಾಲಿವುಡ್ ಸಿನಿಮಾದ ಬಗ್ಗೆ ಜಾಕ್ವೆಲಿನ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಚಿತ್ರ ಬಿಡುಗಡೆಯ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.

‍ಪ್ರಿಯಾಂಕ ನಂತರ ಹಾಲಿವುಡ್‌ಗೆ ಹಾರಿದ ನಟಿಯರ ಪೈಕಿ ಮುಂಚೂಣಿಯಲ್ಲಿರುವ ಜಾಕ್ವೆಲಿನ್‌, ಅಲ್ಲಿ ಮತ್ತಷ್ಟು ಚಿತ್ರಗಳಲ್ಲಿ ಅಭಿನಯಿಸಿ ಪಿಗ್ಗಿಗೆ ಪ್ರತಿಸ್ಪರ್ಧಿಯಾಗುತ್ತಾರೋ ಅಥವಾ ಬಾಲಿವುಡ್‌ನಲ್ಲೇ ಗಟ್ಟಿಯಾಗಿ ನೆಲೆಯೂರುತ್ತಾರೋ ಕಾದು ನೋಡಬೇಕಿದೆ. ‘ಡೆಫಿನೀಷನ್ ಆಫ್ ಫಿಯರ್’  ಸಿನಿಮಾ ಆಗಸ್ಟ್‌ನಲ್ಲಿ ತೆರೆ ಕಾಣಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !