ವಿಶ್ವದ ಕಡಿಮೆ ರೇಟಿಂಗ್‌ ಸಿನಿಮಾ ಪಟ್ಟಿಗೆ ರೇಸ್‌–3

6

ವಿಶ್ವದ ಕಡಿಮೆ ರೇಟಿಂಗ್‌ ಸಿನಿಮಾ ಪಟ್ಟಿಗೆ ರೇಸ್‌–3

Published:
Updated:
ರೇಸ್‌ –3 ಚಿತ್ರದ ದೃಶ್ಯ

ಸಲ್ಮಾನ್‌ ಖಾನ್‌, ಜಾಕ್ವೆಲಿನ್‌ ಫರ್ನಾಂಡಿಸ್‌ ನಟಿಸಿರುವ ರೇಸ್‌– 3 ಚಿತ್ರವು ವಿಶ್ವದ ಅತೀ ಕಡಿಮೆ ರೇಟಿಂಗ್‌ ಪಡೆದ ಸಿನಿಮಾಗಳ ಪಟ್ಟಿಗೆ ಸೇರಿದೆ.

ಸಿನಿಮಾ ವಿಮರ್ಶೆ ಹಾಗೂ ಪ್ರೇಕ್ಷಕರು ಚಿತ್ರದ ಬಗ್ಗೆ ನೀಡಿರುವ ಅಭಿಪ್ರಾಯಗಳಿಂದ ರೇಸ್‌– 3 ಚಿತ್ರಕ್ಕೆ ಈ ಸ್ಥಾನ ಸಿಕ್ಕಿದೆ. ಚಿತ್ರ ಬಿಡುಗಡೆಯಾದ ಮೊದಲ ವಾರದ ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಮಾಡಿತಾದರೂ, ಎರಡನೇ ವಾರದಲ್ಲಿ ಚಿತ್ರದ ಗಳಿಕೆ ತೀರಾ ನೆಲಕಚ್ಚಿತ್ತು. ಇದೆಲ್ಲದರ ಪರಿಣಾಮವಾಗಿ ವಿಶ್ವದ ಅತಿ ಕಡಿಮೆ ರೇಟಿಂಗ್‌ ಪಡೆದ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರ 79ನೇ ಸ್ಥಾನದಲ್ಲಿದೆ. 

ಬಿಡುಗಡೆಗೆ ಮೊದಲು ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಬಹುದು ಎಂದು ನಿರೀಕ್ಷೆ ವ್ಯಕ್ತಪಡಿಸಲಾಗಿತ್ತು. ಬಿಡುಗಡೆಯಾದ ಮೂರು ದಿನದಲ್ಲಿ ಚಿತ್ರವು ₹100 ಕೋಟಿ ಗಳಿಸಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಮಟ್ಟವನ್ನು ತಲುಪುವಲ್ಲಿ ವಿಫಲ ಆಗಿತ್ತು. ಸಲ್ಮಾನ್‌ ಖಾನ್‌ ಅಭಿಮಾನಿಗಳೂ ಸಹ ಚಿತ್ರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಟ್ವಿಟ್ಟರ್‌ನಲ್ಲಿ ‘ನಾವು ದಬಾಂಗ್‌– 3’ ನೋಡಲು ಇಚ್ಛಿಸುವುದಿಲ್ಲ’ ಎಂಬ ಕಾಮೆಂಟ್‌ಗಳನ್ನೂ ಕೆಲವರು ಹಾಕಿದ್ದರು. 

ಈ ಹಿಂದೆ ವಿಶ್ವದ ಅತೀ ಕಡಿಮೆ ರೇಟಿಂಗ್‌ ಪಡೆದ ಸಿನಿಮಾಗಳಲ್ಲಿ ರಾಮ್‌ ಗೋಪಾಲ್‌ ವರ್ಮಾ ಅವರ ‘ಕಿ ಅಗ್‌’, ಹಿಮ್ಮತ್‌ ವಾಲಾ, ಹಂಶಕಲ್ಸ್‌, ಕ್ಯಾ ಕೂಲ್‌ ಹೈ ಹಮ್‌ 3, ತೀಸ್‌ ಮಾರ್‌ ಖಾನ್‌, ದ್ರೋಣ ಸ್ಥಾನ ಪಡೆದಿತ್ತು. 

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !