ಬಸವನಗೌಡರಿಂದ ಚುನಾವಣೆ ತಕರಾರು ಅರ್ಜಿ

7

ಬಸವನಗೌಡರಿಂದ ಚುನಾವಣೆ ತಕರಾರು ಅರ್ಜಿ

Published:
Updated:
ಬಸವನಗೌಡ ತುರವಿಹಾಳ

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಚುನಾವಣೆ ಅಕ್ರಮಗಳನ್ನು ಎಸಗಿದ್ದಾರೆ ಎಂದು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಸವನಗೌಡ ತುರವಿಹಾಳ ಅವರು ಗುಲ್ಬರ್ಗ ಹೈಕೋರ್ಟ್‌ ಪೀಠಕ್ಕೆ ಶುಕ್ರವಾರ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಮಸ್ಕಿ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಮೃತಪಟ್ಟವರ ಹೆಸರಿನಲ್ಲಿ ಹಾಗೂ ವಿದೇಶದಲ್ಲಿ ನೆಲೆಸಿದವರ ಹೆಸರಿನಲ್ಲಿ ಮತದಾನವಾಗಿದೆ. ಈ ರೀತಿ ಹಲವು ಅಕ್ರಮಗಳನ್ನು ಪ್ರತಾಪಗೌಡ ಪಾಟೀಲ ಮತ್ತು ಅವರ ಬೆಂಬಲಿಗರು ನಡೆಸಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು. ಪ್ರತಾಪಗೌಡ ಪಾಟೀಲ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ತಕರಾರು ಅರ್ಜಿಯಲ್ಲಿ ಕೋರಲಾಗಿದೆ.

ಬೆಂಗಳೂರಿನ ಗೋಗಿ ಆ್ಯಂಡ್‌ ಗೋಗಿ ಸಂಸ್ಥೆಯ ವಕೀಲರು ಬಸವನಗೌಡ ಪರ ಗುಲ್ಬರ್ಗ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದಾರೆ.

ಜಿಲ್ಲಾಧಿಕಾರಿಗೆ ದೂರು: ಚುನಾವಣೆ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಬಸವನಗೌಡ ತುರವಿಹಾಳ ಅವರು ರಾಯಚೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅವರಿಗೂ ಈಚೆಗೆ ದೂರು ಸಲ್ಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !