ಜೀವ ಉಳಿಸಲು ರಕ್ತದಾನ ಮಹಾಕಾರ್ಯ

7
ಪೀಸ್‌ ಅಂಡ್‌ ಅವೆರ್‌ನೆಸ್‌ ಸಂಸ್ಥೆ: ರಕ್ತದಾನ ಶಿಬಿರ

ಜೀವ ಉಳಿಸಲು ರಕ್ತದಾನ ಮಹಾಕಾರ್ಯ

Published:
Updated:
ಮೂಡಿಗೆರೆ ತಾಲ್ಲೂಕಿನ ಕೃಷ್ಣಾಪುರದಲ್ಲಿ ಪೀಸ್‌ ಅಂಡ್‌ ಅವೆರ್‌ನೆಸ್‌ ಸಂಸ್ಥೆ ವತಿಯಿಂದ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಮೂಡಿಗೆರೆ: ಸಾವಿನಂಚಿನಲ್ಲಿರುವ ಜೀವಗಳನ್ನು ಬದುಕಿಸಲು ರಕ್ತದಾನವು ಮಹಾಕಾರ್ಯವಾಗಿದೆ ಎಂದು ಎಂಜಿಎಂ ಆಸ್ಪತ್ರೆ ವೈದ್ಯ ಡಾ.ಮುರಳೀಧರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೃಷ್ಣಾಪುರದಲ್ಲಿ ಪೀಸ್‌ ಅಂಡ್‌ ಅವೆರ್‌ನೆಸ್‌ ಸಂಸ್ಥೆ ವತಿಯಿಂದ ಭಾನುವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯವಂತ ವ್ಯಕ್ತಿಯೂ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡುವುದರ ಜತೆಗೆ ತನಗರಿವಿಲ್ಲದಂತೆ ರಕ್ತದ ಅವಶ್ಯಕತೆ ಇರುವ ರೋಗಿಗೆ ರಕ್ತದಾನ ಮಾಡಿ ಜೀವವುಳಿಸಬಹುದು. ಆದ್ದರಿಂದ ಪ್ರತಿಯೊಬ್ಬರಿಗೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದಲ್ಲದೇ ಮತ್ತೊಬ್ಬರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಸಂಶ್ಥೆಯ ಸಂಸ್ಥಾಪಕರಾದ ಅಲ್ತಾಫ್ ಬಿಳಗುಳ ಮಾತನಾಡಿ, ‘ಯುವ ಜನರಲ್ಲಿ ರಕ್ತದಾನದ ಬಗ್ಗೆ ಅರಿವು ಉಂಟಾಗಬೇಕು. ರಕ್ತದ ಅವಶ್ಯಕತೆ ಉಂಟಾದಾಗ ರಕ್ತದ ಮಹತ್ವ ಅರಿವಾಗುತ್ತದೆ. ಆರೋಗ್ಯವಂತ ಯುವ ಜನಾಂಗವು ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ರಕ್ತದಾನಕ್ಕೆ ಮುಂದಾಗಬೇಕು’ ಎಂದರು.

ಉದ್ಯಮಿ ಅಕ್ರಂ ಹಾಜಿ ಮಾತನಾಡಿ, ಯುವ ಜನಾಂಗವು ಸಮಾಜಮುಖಿ ಚಟುವಟಿಕಗಳಲ್ಲಿ ಭಾಗವಹಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಜೀವ ವಿಮಾ ನಿಗಮದ ಜೆ.ಎನ್.ಜೆ ಲೋಬೊ, ಅಂಗನವಾಡಿ ಕಾರ್ಯಕರ್ತೆ ಸುನಂದಾ, ನಮ್ಮ ನರ್ಸರಿ ಮಾಲೀಕ ಸಿಪ್ರಿಯಾನ್ ಲೋಬೊ, ಹ್ಯಾಂಡ್ ಪೋಸ್ಟ್‌ ಜುಮ್ಮಾ ಮಸೀದಿ ಅಧ್ಯಕ್ಷ ಹಮೀದ್, ಗೋಪಾಲ ಗೌಡ, ಸಂಸ್ಥೆಯ ಸದಸ್ಯರಾದ ವಿಜಯ್ ಕುಮಾರ್, ಆಸೀಫ್, ಅಶ್ರಫ್, ಮಣಿಕಂಠ, ಜಿಯಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !