ಸರಣಿ ಮನೆ ಕಳ್ಳನ ಬಂಧನ

7
ಕ್ಯಾತ್ಸಂದ್ರ ಠಾಣೆಯ ಪೊಲೀಸರಿಂದ ₹ 7.5 ಲಕ್ಷ ಮೊತ್ತದ ನಗದು, ಆಭರಣ ವಶ

ಸರಣಿ ಮನೆ ಕಳ್ಳನ ಬಂಧನ

Published:
Updated:
ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣದಲ್ಲಿ ವಶಪಡಿಸಿಕೊಂಡ ನಗದು, ಆಭರಣಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಾಜರು ಪಡಿಸಲಾಯಿತು. ಎಸ್ಪಿ ದಿವ್ಯಾ ಗೋಪಿನಾಥ್, ಡಿಎಸ್ಪಿ ಕೆ.ಎಸ್.ನಾಗರಾಜ್, ಸಿಪಿಐ ರಾಮಕೃಷ್ಣಯ್ಯ, ಸಬ್ ಇನ್‌ಸ್ಪೆಕ್ಟರ್ ಡಿ.ಎಲ್.ರಾಜು ಮತ್ತು ಸಿಬ್ಬಂದಿ ಇದ್ದರು. ಒಳಚಿತ್ರದಲ್ಲಿ ಆರೋಪಿ ಚಂದ್ರು

ತುಮಕೂರು: ಕ್ಯಾತ್ಸಂದ್ರದ ಬಸವೇಶ್ವರ ಬಡಾವಣೆಯಲ್ಲಿ ರಾತ್ರಿ ವೇಳೆ ಮನೆಯ ಹಿಂಬಾಗಿಲು ಮೀಟಿ ಕಳವು ಮಾಡುತ್ತಿದ್ದ ಚಂದ್ರು ಎಂಬಾತನನ್ನು ಕ್ಯಾತ್ಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಕಿಟ್ಟದಹಳ್ಳಿ ಗ್ರಾಮದವನಾಗಿದ್ದಾನೆ. ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಲ್ಲಿ ಮೂರು ಮನೆಗಳಲ್ಲಿ ಕಳವು ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

₹ 2.40 ಲಕ್ಷ ನಗದು, ₹ 5.10 ಲಕ್ಷ ಚಿನ್ನದ ಒಡವೆಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈತನ ವಿರುದ್ಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ 12 ಮನೆಕಳವು ಪ್ರಕರಣ, ಬೆಂಗಳೂರು ನಗರದ ಡಿ.ಜಿ.ಹಳ್ಳಿ, ಕೆ.ಜಿ.ಹಳ್ಳಿ, ಮಡಿವಾಳ ಪೊಲೀಸ್ ಠಾಣೆಗಳಲ್ಲಿ ಮನೆಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.

ಡಿಎಸ್ಪಿ ಕೆ.ಎಸ್.ನಾಗರಾಜ್ ಮಾರ್ಗದರ್ಶನದಲ್ಲಿ ಸಿಪಿಐ ರಾಮಕೃಷ್ಣಯ್ಯ, ಜಿಲ್ಲಾ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಕೆ.ಆರ್.ರಾಘವೇಂದ್ರ, ಕ್ಯಾತ್ಸಂದ್ರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಡಿ.ಎಲ್.ರಾಜು, ಎಎಸ್‌ಐ ಸಿದ್ದಪ್ಪ, ಸಿಬ್ಬಂದಿ ದೇವರಾಜು, ಕೆ.ರಮೇಶ್, ಮೋಹನ್‌ಕುಮಾರ್, ಸೈಯದ್ ರಿಫತ್ ಅಲಿ, ರಮೇಶ್ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !