ಭಿನ್ನ ಹೆಸರಿನಲ್ಲಿ ಬಿಜೆಪಿ ಪ್ರತಿಭಟನೆ

7
ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್‌ 2 ರಂದು ಕರೆ ನೀಡಿರುವ ‘ಉತ್ತರ ಕರ್ನಾಟಕ ಬಂದ್‌’ ವಿರುದ್ಧ ಪಿ.ಜಿ.ಆರ್‌. ಸಿಂಧ್ಯಾ ಅಸಮಾಧಾನ

ಭಿನ್ನ ಹೆಸರಿನಲ್ಲಿ ಬಿಜೆಪಿ ಪ್ರತಿಭಟನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಬಿಜೆಪಿಯವರು ಅಧಿಕಾರ ಸಿಗಲಿಲ್ಲ ಎಂಬ ಕಾರಣಕ್ಕೆ ತೆರೆಮರೆಯಲ್ಲಿ ನಿಂತು ರಾಜಕೀಯ ಉದ್ದೇಶಕ್ಕಾಗಿ ಬೇರೆ ಬೇರೆ ಹೆಸರಲ್ಲಿ ಪ್ರತಿಭಟನೆ ಮಾಡಲು ಹೊರಟಿದ್ದಾರೆ. ರಾಜ್ಯ ಎರಡು ಭಾಗವಾಗಬೇಕು ಎಂದು ಬಯಸುವವರಿಗೆ ಪರಿಜ್ಞಾನವಿಲ್ಲ. ಅಂತಹವರು ಒಮ್ಮೆ ಕರ್ನಾಟಕ ಚರಿತ್ರೆಯನ್ನು ಓದುವುದು ಒಳ್ಳೆಯದು’ ಎಂದು ಜೆಡಿಎಸ್‌ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಪಿ.ಜಿ.ಆರ್‌. ಸಿಂಧ್ಯಾ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಖಂಡ ಕರ್ನಾಟಕಕ್ಕಾಗಿ ಹಲವು ಮಹನೀಯರು ದುಡಿದಿದ್ದಾರೆ. ಅದರ ತಿಳಿವಳಿಕೆ ಇಲ್ಲದವರು ಮತ್ತೊಂದು ರಾಜ್ಯ ಕೇಳುತ್ತಾರೆ. ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್‌ 2 ರಂದು ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್‌ನ್ನು ಯಾರು ಏನೂ ಬೇಕಾದರೂ ಕರೆಯಬಹುದು. ಆದರೆ, ಬಂದ್‌ಗೆ ಜನ ನಿರಸ ಪ್ರತಿಕ್ರಿಯೆ ತೋರಿಸಲಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಈಗಿನ ಸರ್ಕಾರದ ಬಗ್ಗೆ ರೈತರಲ್ಲಿ ಸಮಾಧಾನವಿದೆ. ಪ್ರತ್ಯೇಕ ರಾಜ್ಯ ವಿಚಾರವಾಗಿ ಬಿಜೆಪಿಯಲ್ಲಿಯೇ ಪರ ವಿರೋಧದ ಗೊಂದಲವಿದೆ. ಬಂದ್‌ಗೆ ಕರೆ ಕೊಟ್ಟರವರಿಗೆ ದೇವರು ಅನುಕಂಪ, ಪ್ರೀತಿ ಕರುಣಿಸಲಿ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !