ಭತ್ತದ ಗದ್ದೆ ನಡುವೆ ಮುಖ್ಯಮಂತ್ರಿ ಭಾಷಣ

7

ಭತ್ತದ ಗದ್ದೆ ನಡುವೆ ಮುಖ್ಯಮಂತ್ರಿ ಭಾಷಣ

Published:
Updated:
Deccan Herald

ಮಂಡ್ಯ: ಪಾಂಡವಪುರ ತಾಲ್ಲೂಕು ಸೀತಾಪುರ ಗ್ರಾಮದ ಹೊರವಲಯದಲ್ಲಿರುವ ಮಹಾದೇವಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಆ.11ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭತ್ತದ ನಾಟಿ ಮಾಡಲಿದ್ದಾರೆ.

ಮಂಗಳವಾರ ಗದ್ದೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಸ್ಥಳ ಪರಿಶೀಲನೆ ನಡೆಸಿದರು.

ನಾಟಿಯ ದಿನ ಮುಖ್ಯಮಂತ್ರಿಗಳು ರೈತರಿಗೆ ಗದ್ದೆಯಲ್ಲೇ ರೈತರಿಗೆ ಸಂದೇಶ ನೀಡುತ್ತಾರೆ. ಗದ್ದೆ ಮಧ್ಯಭಾಗ ಮೂವರು ನಿಲ್ಲುವ ಪುಟ್ಟ ವೇದಿಕೆ ನಿರ್ಮಾಣ ಮಾಡಲಾಗುವುದು. ಅಲ್ಲಿಂದ ಮುಖ್ಯಮಂತ್ರಿಗಳು ಭಾಷಣ ಮಾಡುವರು. ಈ ಕುರಿತು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ನಾಟಿ ದಿನ ಅಧಿಕಾರಿಗಳು ಸಿಡಿಎಸ್ ನಾಲೆ ಸುತ್ತಲೂ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಬೇಕು. ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗಂದತೆ ಕ್ರಮ ವಹಿಸಬೇಕು. ಅಗತ್ಯ ಭದ್ರತೆ ವಹಿಸಬೇಕು. ಸಿಡಿಎಸ್ ನಾಲೆಯ ಕಡೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ಇದ್ದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !