ಬಸ್‌ ನಿಲ್ದಾಣಕ್ಕೆ ಉಚಿತ ವೈಫೈ: ಶಾಸಕ

7

ಬಸ್‌ ನಿಲ್ದಾಣಕ್ಕೆ ಉಚಿತ ವೈಫೈ: ಶಾಸಕ

Published:
Updated:
Deccan Herald

 ಮೂಡುಬಿದಿರೆ: ಬಮೂಡುಬಿದಿರೆ, ಮೂಲ್ಕಿ, ಬಜ್ಪೆ ಬಸ್‌ ನಿಲ್ದಾಣಗಳಿಗೆ ಉಚಿತ ವೈ–ಫೈ ಒದಗಿಸುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮೂರು ತಿಂಗಳೊಳಗೆ ಅನುಷ್ಠಾನಗೊಳ್ಳಲಿದೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಇಲ್ಲಿನ ಬಸ್‌ನಿಲ್ದಾಣದಲ್ಲಿ ಕಾಡುತ್ತಿರುವ ಪಾರ್ಕಿಂಗ್ ಅವ್ಯವಸ್ಥೆ ಬಸ್ ನಿಲುಗಡೆ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ ಹಾಗೂ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ಸೋರುತ್ತಿರುವುದರ ಬಗ್ಗೆ ನಮೋಬ್ರಿಗೇಡ್ ನೀಡಿದ ದೂರಿನ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ  ಪರಿಶೀಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

‘ಬಸ್‌ ನಿಲ್ದಾಣಗಳಲ್ಲಿ ಬಹಳಷ್ಟು ಜನ ಸ್ವ-ಉದ್ಯೋಗ ಮಾಡುವುದರೊಂದಿಗೆ ಶಾಲಾ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇಲ್ಲಿ ಇಂಟರ್ನೆಟ್ ಬಳಕೆಗಾಗಿ ವೈ–ಫೈ ಅವಶ್ಯಕತೆಯಿದೆ’ ಎಂದರು.

ನಿಲ್ದಾಣದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪುರಸಭೆ, ಪೊಲೀಸ್ ಅಧಿಕಾರಿಗಳು ಹಾಗೂ ವಾಹನ ಮಾಲೀಕರು ಮತ್ತು ಇಲ್ಲಿನ ವ್ಯಾಪಾಸ್ಥರ ಜಂಟಿ ಸಭೆ ಕರೆದು ಚರ್ಚಿಸಿಲಾಗುವುದು. ಜಿಲ್ಲಾ ಪಂಚಾಯತಿ ಸದಸ್ಯ ಕೆ. ಪಿ. ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಲಕ್ಷ್ಮಣ ಪೂಜಾರಿ, ಬಿಜೆಪಿ ಮುಖಂಡ ಮೇಘನಾಥ ಶೆಟ್ಟಿ, ಹೊಸಬೆಟ್ಟು ಪಂಚಾಯತಿ ಸದಸ್ಯ ಸತೀಶ್ ಶೆಟ್ಟಿ  ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !