ಪೊಲೀಸರ ಮೇಲೆ ಹಲ್ಲೆ: ಪಾನಮತ್ತ 10 ಯುವಕರ ಬಂಧನ

7

ಪೊಲೀಸರ ಮೇಲೆ ಹಲ್ಲೆ: ಪಾನಮತ್ತ 10 ಯುವಕರ ಬಂಧನ

Published:
Updated:

ಅಂಕೋಲಾ: ಕರ್ತವ್ಯ ನಿರತ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ, ಗಸ್ತು ವಾಹನವನ್ನು ಜಖಂಗೊಳಿಸಿದ ಆರೋಪದ ಮೇಲೆ, ಇಲ್ಲಿನ ಪೊಲೀಸರು ಪಾನಮತ್ತರಾಗಿದ್ದ ಹತ್ತು ಯುವಕರನ್ನು ಭಾನುವಾರ ಬಂಧಿಸಿದ್ದಾರೆ.

ಹುಬ್ಬಳ್ಳಿಯ ಗೋಪನಕೋಪ್ಪದ ದಾನೇಶ ಅಂಗಡಿ, ನಿತೇಶ ಅಂಗಡಿ, ಪ್ರಶಾಂತ ನಿಡಗುಂದಿ, ಶಿವಪ್ಪ ನೂಲ್ವಿ, ರವಿಚಂದ್ರ ಪೂಜಾರ, ರಮೇಶ ಪೂಜಾರ, ದೇವೆಂದ್ರಪ್ಪ ಹಡಪದ, ಯಲ್ಲಪ್ಪ ಮೆಗುಂಡಿ, ನಾಗರಾಜ ಹಿರೆಮಠ ಹಾಗೂ ಸುಳ್ಳ ಗ್ರಾಮದ ಅಶೋಕ ಗಾಣಿಗೇರ ಬಂಧಿತರು.

ತಾಲ್ಲೂಕಿನ ವಿಭೂತಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕರು, ಸುಂಕಸಾಳ ಬಳಿ ವಾಹನವನ್ನು ನಿಲ್ಲಿಸಿಕೊಂಡು ರಸ್ತೆಯಲ್ಲಿಯೇ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಗಸ್ತು ಸಿಬ್ಬಂದಿ ಶ್ರೀಕಾಂತ, ಮದ್ಯಪಾನ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಾರೆ. ಆಗ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಶ್ರೀಕಾಂತ ಅವರ ನೆರವಿಗೆ ಬಂದ, ಗಸ್ತು ವಾಹನ ಚಾಲನ ಸಂತೋಷ ಅವರಿಗೂ ನಿಂದಿಸಿ, ಬಾಟಲಿಯಿಂದ ಹಲ್ಲೆ ನಡೆಸಿ, ವಾಹನವನ್ನು ಜಖಂಗೊಳಿಸಿದ್ದಾರೆ. ವಿಷಯ ತಿಳಿದು, ಪಿಎಸ್‌ಐ ಶ್ರೀಧರ ಅವರು ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು, ಯುವಕರನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !