ಮಸುಕಾದ ಇಳೆ, ಎಲ್ಲೆಲ್ಲೂ ಸೋನೆ ಮಳೆ

7

ಮಸುಕಾದ ಇಳೆ, ಎಲ್ಲೆಲ್ಲೂ ಸೋನೆ ಮಳೆ

Published:
Updated:
Deccan Herald

ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಲಗ್ಗರು ಹಾಕಿದ ಮೋಡಗಳು ಮಂಗಳವಾರ ಸಹ ಕದಲಲಿಲ್ಲ. ದಿನವೀಡಿ ಮಸುಕಾದ ಇಳೆ, ಸೋನೆ ಮಳೆಯ ಜುಗಲ್ಬಂದಿಯ ನಡುವೆ ಜನರು ನಡಗುತ್ತಲೇ ಹೊರಗೆ ಅಡಿ ಇಟ್ಟರು.

ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಮಳೆ ಕಣ್ಣು ಮುಚ್ಚಾಲೆ ಆಟ ಮುಂದುವರಿದೇ ಇತ್ತು. ಒಂದು ಬಾರಿ ತುಂತುರು, ಒಮ್ಮೊಮ್ಮೆ ಸಾಧಾರ, ಬೆನ್ನ ಹಿಂದೆಯೇ ರಭಸವಾಗಿ ಸುರಿದು ಇಳೆಯನ್ನು ತೊಯ್ದು ತೊಪ್ಪೆ ಮಾಡುತ್ತಿದ್ದ ವರುಣ ತಣ್ಣನೆಯ ಗಾಳಿಯ ಜತೆಗೆ ಚಳಿಯನ್ನು ಹೆಚ್ಚಿಸಿದ್ದ. ಹೀಗಾಗಿ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದರು.

ನೀರಿನ ಕೊರತೆಯಿಂದ ಬಾಡುವ ಹಂತಕ್ಕೆ ತಲುಪಿದ್ದ ಜೂನ್ ಆರಂಭದಲ್ಲಿ ಬಿತ್ತನೆ ಮಾಡಿದ ರಾಗಿ, ಮುಸುಕಿನ ಜೋಳ, ನೆಲಗಡಲೆ, ತೊಗರಿ ಬೆಳೆಗಳು ಈ ಮಳೆಯಿಂದಾಗಿ ನಳನಳಿಸಲು ಆರಂಭಿಸಿದ್ದು, ರೈತರ ಮೊಗದಲ್ಲಿ ಸಂತಸ ಛಾಯೆ ಮೂಡಿಸಿದೆ.

ಜಿಲ್ಲೆಯಲ್ಲಿ ಸದ್ಯ ಶೇ45ರಷ್ಟು ಬಿತ್ತನೆಯಾಗಿದೆ. ಮುಂಬರುವ ದಿನಗಳಲ್ಲಿ ಕೂಡ ಉತ್ತಮ ಮಳೆ ಬೀಳುವ ಮುನ್ಸೂಚನೆ ದೊರೆತಿದ್ದು, ಚೆನ್ನಾಗಿ ಮಳೆ ಸುರಿದರೆ ರಾಗಿ, ಮುಸುಕಿನ ಜೋಳ ಬಿತ್ತನೆ ಮಾಡಬಹುದೆಂದು ರೈತರು ಎದುರು ನೋಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !