ಎರಡನೇ ಮಹಾಯುದ್ಧ ವೇಳೆ ಸ್ಫೋಟಗೊಂಡಿದ್ದ ಹಡಗಿನ ಅವಶೇಷ ಪತ್ತೆ

7

ಎರಡನೇ ಮಹಾಯುದ್ಧ ವೇಳೆ ಸ್ಫೋಟಗೊಂಡಿದ್ದ ಹಡಗಿನ ಅವಶೇಷ ಪತ್ತೆ

Published:
Updated:

ವಾಷಿಂಗ್ಟನ್‌ : ಎರಡನೇ ಮಹಾಯುದ್ಧದ ವೇಳೆ ಸ್ಫೋಟಗೊಂಡಿದ್ದ ಹಡಗಿನ ಭಾಗವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 

ಅಮೆರಿಕದ ಯುದ್ಧ ಹಡಗು ಯುಎಸ್‌ಎಸ್‌ ಅಬ್ನೆರ್‌ ರೀಡ್‌ ಅಮೆರಿಕದ ಕಿಸ್ಕಾ ದ್ವೀಪದ ಬಳಿ ಆಳ ಸಮುದ್ರದಲ್ಲಿ ಪತ್ತೆಯಾಗಿದೆ. 

ಸುಮಾರು 75 ಅಡಿ ಉದ್ದದ ಭಾಗ ಪತ್ತೆಯಾಗಿದೆ. ಮಹಾಯುದ್ಧದ ವೇಳೆ ಈ ಯುದ್ಧನೌಕೆ ಗಸ್ತು ತಿರುಗುವ ಕೆಲಸ ಮಾಡುತ್ತಿತ್ತು. ಆಗ ಸಂಭವಿಸಿದ ಸ್ಫೋಟದಿಂದ ಭಾಗವಾಗಿ ಮುಳುಗಿತ್ತು. ಸ್ಫೋಟದಲ್ಲಿ ಸಂಪೂರ್ಣ ನೌಕೆ ಮುಳುಗಿರಲಿಲ್ಲ. ಅದರ ಒಂದು ಭಾಗ ತುಂಡಾಗಿ ಮುಳುಗಿತ್ತು. 

ಈ ಘಟನೆಯಲ್ಲಿ ಅಮೆರಿಕ ನೌಕಾಪಡೆಯ 71 ಮಂದಿ ಬಲಿಯಾಗಿದ್ದರು.

‘ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಈ ಆವಿಷ್ಕಾರ ಗಮನಾರ್ಹವಾದುದು’ ಎಂದು ನೌಕಾಪಡೆಯ ನಿವೃತ್ತ ಹಿರಿಯ ಅಡ್ಮಿರಲ್ ಟಿಮ್ ಗಲ್ಲಾಡೆಟ್ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !