ಶಾರ್ಟ್‌ ಸರ್ಕಿಟ್‌: ಬಟ್ಟೆ ಅಂಗಡಿ ಭಸ್ಮ

7

ಶಾರ್ಟ್‌ ಸರ್ಕಿಟ್‌: ಬಟ್ಟೆ ಅಂಗಡಿ ಭಸ್ಮ

Published:
Updated:
Deccan Herald

ಮಂಡ್ಯ: ತಾಲ್ಲೂಕಿನ ಸಾತನೂರು ಗ್ರಾಮದ ಬಟ್ಟೆ ಅಂಗಡಿಯೊಂದಕ್ಕೆ ಗುರುವಾರ ನಸುಕಿನಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ಸಿದ್ಧ ಉಡುಪು, ಹೊಲಿಗೆ ಯಂತ್ರ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಆನಂದ್‌ ಎಂಬುವವರಿಗೆ ಸೇರಿದ ಅಂಗಡಿಗೆ ಬೆಂಕಿ ತಲುಲಿದೆ. ಟೇಲರಿಂಗ್‌ ಮಾಡುತ್ತಿದ್ದ ಅವರು ತಮ್ಮ ಮನೆ ಮುಂಭಾಗದ ಅಂಗಡಿ ಮಳಿಗೆಯಲ್ಲಿ ಸಿದ್ಧ ಉಡುಪು ಮಾರಾಟ ಮಾಡುತ್ತಿದ್ದರು. ಮಳಿಗೆ ಹೆಂಚಿನ ಕಟ್ಟಡವಾಗಿದ್ದು ಮರದ ಜಂತಿಗಳಿಗೆ ಬೆಂಕಿ ತಗುಲಿ ಅಪಾರ ಹಾನಿ ಉಂಟಾಗಿದೆ. ಮೂರು ಹೊಲಿಗೆ ಯಂತ್ರಗಳು, ಗ್ರಾಹಕರು ಹೊಲಿಗೆಗಾಗಿ ಕೊಟ್ಟಿದ್ದ ಬಟ್ಟೆಗಳು, ಸಿದ್ಧ ಉಡುಪು, ಅಟ್ಟದ ಮೇಲಿದ್ದ ಬಟ್ಟೆಗಳು ಬೆಂಕಿಗೆ ಆಹುತಿಯಾಗಿವೆ.

ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಹಿಂಭಾಗದ ಮನೆಯಲ್ಲಿ ವಾಸವಾಗಿದ್ದ ಆನಂದ್‌ ಕುಟುಂಬ ಸದಸ್ಯರು ಹೊರಕ್ಕೆ ಓಡಿ ಬಂದಿದ್ದಾರೆ. ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು.

ಪೊಲೀಸರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !