‘ಸರ್ವೋತ್ತಮ ಶ್ರೀಕಾಂತ ವಕೀಲರು’ ಕೃತಿ ಲೋಕಾರ್ಪಣೆ 16ಕ್ಕೆ

7

‘ಸರ್ವೋತ್ತಮ ಶ್ರೀಕಾಂತ ವಕೀಲರು’ ಕೃತಿ ಲೋಕಾರ್ಪಣೆ 16ಕ್ಕೆ

Published:
Updated:

ರಾಯಚೂರು: ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ವೈ.ಶ್ರೀಕಾಂತ ಅವರ ಜೀವನಾಧಾರಿತವಾದ ‘ಸರ್ವೋತ್ತಮ ಶ್ರೀಕಾಂತ ವಕೀಲರು’ ಕೃತಿ ಲೋಕಾರ್ಪಣೆಯನ್ನು ಸೆಪ್ಟೆಂಬರ್ 16ರಂದು ಬೆಳಿಗ್ಗೆ 10.30ಕ್ಕೆ ನಗರದ ನ್ಯೂ ಸಂತೋಷಿ ಪ್ಯಾಲೇಸ್‌ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಶಾಂತ ಪ್ರಕಾಶನದ ಅಧ್ಯಕ್ಷ ವೈ.ಎಸ್.ಪ್ರಶಾಂತ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಮಲದಕಲ್ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರು ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಲಿದ್ದು, ಸಂಸದ ಬಿ.ವಿ.ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ್, ಒಂದನೇ ಹೆಚ್ಚುವರಿ ನ್ಯಾಯಾಧೀಶ ಮಹಾದೇವಯ್ಯ, ಕೆಪಿಎಸ್‌ಸಿ ಸದಸ್ಯ ವೈ.ಶ್ರೀಕಾಂತ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ, ಕರ್ನಾಟಕ ಪಿಪುಲ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಧಾಕೃಷ್ಣ.ಆರ್.ದೊಡ್ಡಮನಿ, ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ, ವಕೀಲ ಬಿ.ಆರ್.ಕೊಪ್ಪ ಇತರರು ಭಾಗವಹಿಸಲಿದ್ದಾರೆ ಎಂದರು.

ವಕೀಲರಾದ ಶರಣಪ್ಪ, ರಾಮಚಂದ್ರ, ಶರಶ್ಚಂದ್ರ, ಶ್ರೀನಿವಾಸ, ಶರಣಪ್ಪ ಅಸ್ಕಿಹಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !