ಸಾಗರದಷ್ಟಿದೆ

7

ಸಾಗರದಷ್ಟಿದೆ

Published:
Updated:
Deccan Herald

ನನ್ನ ಕಣ್ಣೀರನ್ನು

ಇದರಲ್ಲಿ ತುಂಬಿಡಲಾರೆ

ನಿಮ್ಮದು ಸಾಗರದಷ್ಟಿದೆ ತುಳುಕುತ್ತ

 

ಗಾಳಿಯಂತೆ ಅವಳು ಬಂದದ್ದು ಹೋದದ್ದು

ಕೋಗಿಲೆಯ ಕೂಗಿನಲ್ಲೋ ನವಿಲ ಕುಣಿತದಲ್ಲೋ

ತೋರಿಸುವುದು ಕ್ಲೀಷೆಯಾಗಿದೆ

 

ಶೇಕ್ಸ್‌ಪಿಯರ್‌ನ ನಾಯಕರು ವಾಸ್ತವಕ್ಕೆ

ಧುಮುಕಿ

ಬೆಚ್ಚಿಬಿದ್ದಿದ್ದಾರೆ ತುಂಬಾ ಸಿಂಪಲ್ಲಾಗಿ

ಜರುಗುತ್ತಿರುವ ಕೊಲೆಗಳ ನೋಡುತ್ತ

 

ನಿನ್ನೆಯ ಬದುಕು ಮೊನ್ನೆಯಂತೆ

ಇದೆ

ಈ ಕ್ಷಣದ್ದು ಮುಂದಿನ ಕ್ಷಣದಲ್ಲಿ

ಅಡಗಿದ್ದದ್ದು

ಅರಿವಾಗುವುದಿಲ್ಲ

 

ಕಳೆದ ನೆನಪು ಮಾತ್ರ

ಇಂದನ್ನು ಸಾಗಿಸುತ್ತಿದೆ

ಸಿಗದ ನೋವು ನಿರಾಸೆ

ಸಿಕ್ಕಿರುವುದಕ್ಕೆ ಬೆಂಕಿಯ ಬೆಳಕಾಗಿದೆ

 

ಕಣ್ಣೀರಿನ ಉಪ್ಪಿನಲ್ಲಿ

ಅವಳ ಮೌನ ಮಾತು

ಕೆಡದೆ ಇವೆ

ಇರಲಿ

 

ಇದರೆಲ್ಲದರ ಗೊಡವೆ ಲೋಕಕ್ಕೆ

ಯಾಕೆ

ನಿಮಗೂ ಯಾಕೆ

ನಿಮ್ಮದು ಸಾಗರದಷ್ಟಿದೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !