₹ 20 ಕೋಟಿ ವೆಚ್ಚದಲ್ಲಿ ಸಹಕಾರ ಭವನ: ಶಾಸಕ ಶ್ರೀನಿವಾಸಗೌಡ ಭರವಸೆ

7
ಟಿಎಪಿಸಿಎಂಎಸ್ ಸದಸ್ಯರ ಸಭೆ

₹ 20 ಕೋಟಿ ವೆಚ್ಚದಲ್ಲಿ ಸಹಕಾರ ಭವನ: ಶಾಸಕ ಶ್ರೀನಿವಾಸಗೌಡ ಭರವಸೆ

Published:
Updated:
Deccan Herald

ಕೋಲಾರ: ‘ನಗರದಲ್ಲಿ ₹ 20 ಕೋಟಿ ಅಂದಾಜು ವೆಚ್ಚದಲ್ಲಿ ಸಹಕಾರ ಭವನ ಮತ್ತು ಸೂಪರ್ ಮಾರುಕಟ್ಟೆ ನಿರ್ಮಾಣಕ್ಕೆ ಸಹಕಾರ ನೀಡುತ್ತೇವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ಇಲ್ಲಿ ಶನಿವಾರ ನಡೆದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ಜನತಾ ಬಜಾರ್ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ‘ಡೂಂಲೈಟ್ ವೃತ್ತದಲ್ಲಿರುವ ಗ್ರಾಮೋದ್ಯೋಗ ಕಸಬುದಾರರ ಕೈಗಾರಿಕಾ ವಿವಿದ್ಧೋದ್ದೇಶ ಸಂಘದ ಜಾಗವು ಇದೀಗ ಸಹಕಾರ ಇಲಾಖೆಯ ವಶದಲ್ಲಿದೆ. ಈ ಜಾಗವನ್ನು ಟಿಎಪಿಸಿಎಂಎಸ್ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು’ ಎಂದರು.

‘ಈ ಜಾಗದಲ್ಲಿ ಸೂಪರ್ ಮಾರುಕಟ್ಟೆ, ಸಹಕಾರ ಇಲಾಖೆಗೆ ಸಂಬಂಧಿಸಿದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತದೆ. ಇದಕ್ಕೆ ಡಿಸಿಸಿ ಬ್ಯಾಂಕ್‌ ಸಹಕಾರ ನೀಡಬೇಕು. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಕೈಲಾದ ಸೇವೆ ಮಾಡಿಕೊಂಡು ಬಂದಿದ್ದೇನೆ. ಇಫ್ಕೋ ಟೋಕಿಯೊ ಸಂಸ್ಥೆಯಿಂದ ರೈತರಿಗೆ ಸೌಕರ್ಯ ತಲುಪಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಮಾದರಿ ಕೆಲಸ: ‘ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪೈಕಿ ಕೋಲಾರದ ಸೊಸೈಟಿ ಮಾದರಿಯಾಗಿ ಕೆಲಸ ಮಾಡುತ್ತಿದೆ. ಸೊಸೈಟಿಯಿಂದ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದು, ಸೊಸೈಟಿ ಲಾಭದಾಯಕವಾಗಿ ನಡೆಯುತ್ತಿದೆ. ಸೊಸೈಟಿಯ ಮತ್ತಷ್ಟು ಅಭಿವೃದ್ಧಿಗೆ ಅಡಳಿತ ಮಂಡಳಿ ಸದಸ್ಯರು ಸಹಕರಿಸಬೇಕು’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ ಮನವಿ ಮಾಡಿದರು.

‘ಸಹಕಾರ ಸಂಘಗಳು ಉಳಿಯಬೇಕಾದರೆ ಷೇರುದಾರರ ಸಹಕಾರ ಅಗತ್ಯ. ರೈತರು ಹಾಗೂ ಜನರು ಸಹಕಾರ ಸಂಘಗಳನ್ನು ನೋಡುವ ದೃಷ್ಟಿಯೇ ಬೇರೆಯಾಗಿತ್ತು. ಈಗ ಆ ಮನೋಭಾವ ದೂರವಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಹೇಳಿದರು.

ಜೀವ ತುಂಬಿದ್ದೇವೆ: ‘ಜಿಲ್ಲೆಯಲ್ಲಿ ಮುಳುಗುವ ಹಂತದಲ್ಲಿದ್ದ ಬಹಳಷ್ಟು ಸೊಸೈಟಿಗಳಿಗೆ ಜೀವ ತುಂಬಿದ್ದೇವೆ. ಸೊಸೈಟಿಗಳು ಜನರ ನಂಬಿಕೆ ಉಳಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಅವಿಭಜಿತ ಕೋಲಾರ ಜಿಲ್ಲೆಯ ಟಿಎಪಿಸಿಎಂಎಸ್ ಸೊಸೈಟಿಗಳ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ದಯಾನಂದ್, ಟಿಎಪಿಸಿಎಂಎಸ್ ನಿರ್ದೇಶಕರಾದ ಜಿ.ನಾಗರಾಜಪ್ಪ, ಆರ್.ಚಂದ್ರೇಗೌಡ, ವಿ.ನಂಜುಂಡಗೌಡ, ನಾರಾಯಣಪ್ಪ, ಎಂ.ಬಸವರಾಜಪ್ಪ, ಕೆ.ರಾಮಚಂದ್ರಪ್ಪ, ಬಿ.ವೆಂಕಟರಾಮೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !