ಭದ್ರಾ ಮೇಲ್ದಂಡೆ: ಸುರಂಗ ಕೊರೆಯುವ ಕಾರ್ಯ ಪೂರ್ಣ

7

ಭದ್ರಾ ಮೇಲ್ದಂಡೆ: ಸುರಂಗ ಕೊರೆಯುವ ಕಾರ್ಯ ಪೂರ್ಣ

Published:
Updated:
Deccan Herald

ಚಿತ್ರದುರ್ಗ: ಭದ್ರಾ ಮೇಲ್ದಂಡೆ ನಾಲೆಗೆ ತರೀಕೆರೆ ತಾಲ್ಲೂಕಿನ ಅಜ್ಜಂಪುರದ ಬಳಿ ಕೈಗೆತ್ತಿಕೊಂಡ ಏಳು ಕಿ.ಮೀ ಉದ್ದದ ಸುರಂಗ ಕೊರೆಯುವ ಕಾರ್ಯ ಸೋಮವಾರ ಪೂರ್ಣಗೊಂಡಿತು.

ಅಜ್ಜಂಪುರ ಹಾಗೂ ನರಸೀಪುರ ಮಾರ್ಗ ಮಧ್ಯೆ ಇದ್ದ ಕಲ್ಲು ಬೆಟ್ಟದಲ್ಲಿ ಸುರಂಗ ನಾಲೆ ನಿರ್ಮಾಣ ಕಾರ್ಯ 2014ರಲ್ಲಿ ಆರಂಭಗೊಂಡಿತ್ತು. ₹ 300 ಕೋಟಿ ವೆಚ್ಚದ ಈ ಕಾಮಗಾರಿಯು ಭದ್ರಾ ಮೇಲ್ದಂಡೆ ಯೋಜನೆಯ ಪ್ರಮುಖ ಘಟ್ಟಗಳಲ್ಲಿ ಒಂದು.

ಸುಮಾರು 150 ಅಡಿ ಆಳದಲ್ಲಿ ಸುರಂಗ ನಿರ್ಮಾಣ ಮಾಡಲಾಗಿದೆ. ಮಧ್ಯದಲ್ಲಿ 2 ಕಿ.ಮೀ. ದೂರ ಮಣ್ಣಿನ ಪದರ ಸಿಕ್ಕಿದ್ದರಿಂದ ಸುರಂಗ ಕೊರೆಯುವ ತಂತ್ರಜ್ಞಾನವನ್ನು ಬದಲಾವಣೆ ಮಾಡಲಾಗಿತ್ತು. ಇದರಿಂದ ಈ ಪ್ರಕ್ರಿಯೆ ಕೊಂಚ ವಿಳಂಬವಾಗಿತ್ತು.

ಅಜ್ಜಂಪುರ ಹಾಗೂ ನರಸೀಪುರ ಎರಡೂ ಕಡೆಯಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅತ್ಯಾಧುನಿಕ ಯಂತ್ರಗಳು ಹಾಗೂ ನೂರಾರು ಕಾರ್ಮಿಕರು ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದರು. ನಿತ್ಯ 1ರಿಂದ 2 ಮೀಟರ್‌ನಷ್ಟು ಸುರಂಗ ಕೊರೆಯಲಾಗುತ್ತಿತ್ತು. ಬಾಕಿ ಉಳಿದಿದ್ದ 2 ಮೀಟರ್‌ ಸುರಂಗ ಕೊರೆಯುವ ಕೆಲಸ ಸೋಮವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಪೂರ್ಣಗೊಂಡಿತು ಎಂದು ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !