ಅಪಹರಣ: 24ಗಂಟೆಯಲ್ಲಿ ಆರೋಪಿಗಳ ಬಂಧನ

7

ಅಪಹರಣ: 24ಗಂಟೆಯಲ್ಲಿ ಆರೋಪಿಗಳ ಬಂಧನ

Published:
Updated:
Deccan Herald

ಹುಣಸೂರು: ಕೇರಳದ ಹಣ್ಣಿನ ವ್ಯಾಪಾರಿಯನ್ನು ಅಪಹರಿಸಿದ ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬಿ.ಕೆ.ಮೊಹಮ್ಮದ್‌ ಮುಸ್ತಾಕ್‌ (28), ಮಹಮ್ಮದ್‌ ಸಿನನ್‌ (21), ಉಮ್ಮರ್‌ ಫಾರೂಕ್‌ (29), ಮಹಮ್ಮದ್‌ ಸೀನಾನ್‌ (25), ಮಹಮ್ಮದ್‌ ಬಸೀರ್‌ (29), ಮಹಮ್ಮದ್ ಆಸೀಫ್‌ (26), ಇಬ್ರಾಹಿಂ ಖಲೀಲ್‌ (25) ಬಂಧಿತ ಆರೋಪಿಗಳು.

ಘಟನೆ ವಿವರ: ಕೇರಳ ರಾಜ್ಯದ ತಲಶ್ಯೆರಿಯ ಹಣ್ಣಿನ ವ್ಯಾಪಾರಿ ಸುಬೇರ್‌ ಸೆ.30ರಂದು ರಾತ್ರಿ ಬೆಂಗಳೂರಿಗೆ ಹೋಗುತ್ತಿದ್ದಾಗ ಹುಣಸೂರು– ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಕರ್ಣಕುಪ್ಪೆ ಗೇಟ್‌ ಬಳಿ ವಾಹನ ಅಡ್ಡಗಟ್ಟಿ ಅವರನ್ನು ಅಪಹರಿಸಿದ್ದರು. ಈ ಕುರಿತು ವಾಹನ ಚಾಲಕ ರಹೀಂ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ಬೆಳಿಗ್ಗೆ ದೂರು ದಾಖಲಿಸಿದ್ದರು.

ಕೂಡಲೇ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿ, ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌ ಜಾಡನ್ನು ಅರಸಿ ಹೋದಾಗ ಅವರು ಮಂಗಳೂರು ಬಂದರಿನಲ್ಲಿ ಇರುವುದು ತಿಳಿಯಿತು. ಅಲ್ಲಿನ ಪೊಲೀಸರ ಸಹಾಯದೊಂದಿಗೆ ಬಂಧಿಸಲಾಯಿತು. ಸುಬೇರ್‌ ಅವರೊಂದಿಗೆ ವ್ಯವಹಾರದಲ್ಲಿ ಉಂಟಾದ ವೈಮನಸ್ಯದಿಂದ ಈ ಕೃತ್ಯ ಎಸಗಿದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಸರ್ಕಲ್ ಇನ್ ಸ್ಪೆಕ್ಟರ್‌ ಪೂವಯ್ಯ ತಿಳಿಸಿದ್ದಾರೆ.

 ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಪಿ.ಎಸ್‌.ಐ. ಶಿವಪ್ರಕಾಶ್‌, ಸಿಬ್ಬಂದಿ ಲಿಂಗರಾಜಪ್ಪ, ಪ್ರಸಾದ್‌, ಬಿಳಿಕೆರೆ ಠಾಣೆ ಸಿಬ್ಬಂದಿ ಚೇತನ್‌ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !