ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ: ಶಾಸಕ ಎ.ಟಿ.ರಾಮಸ್ವಾಮಿ

7

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ: ಶಾಸಕ ಎ.ಟಿ.ರಾಮಸ್ವಾಮಿ

Published:
Updated:

ಕೊಣನೂರು: ತಾಲ್ಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

ರಾಮನಾಥಪುರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಬಾರ್ಡ್ ಯೋಜನೆಯ ₹ 49.95 ಲಕ್ಷ ವೆಚ್ಚದ 2 ನೂತನ ಕೊಠಡಿಗಳು, ಹೈಟೆಕ್ ಶೌಚಾಲಯ ಹಾಗೂ ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದು ಉನ್ನತ ಸ್ಥಾನದಲ್ಲಿರುವವರನ್ನು ಅಭಿವೃದ್ದಿ ಸಮಿತಿಗೆ ನೇಮಿಸಿ ಅವರ ಸಹಕಾರದೊಂದಿಗೆ ಅವಶ್ಯವಿರುವ ಸೌಕರ್ಯಗಳನ್ನು ಮಾಡಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು  ತಿಳಿಸಿದರು.

ರಾಜ್ಯದಲ್ಲಿಯೇ ಇದು ವಿನೂತನ ಪ್ರಯತ್ನವಾಗಿದೆ. ನನ್ನ ಪ್ರಯತ್ನಕ್ಕೆ ಅನೇಕರು ಕೈಜೋಡಿಸಿರುವುದು ತೃಪ್ತಿ ತಂದಿದ್ದು ಹಳ್ಳಿ ಮೈಸೂರಿನ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯವರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಿರುವುದು. ಮಲ್ಲಿಪಟ್ಟಣ ಕಾಲೇಜಿನ ಅಭಿವೃದ್ಧಿಗೆ ಯೋಜಿಸುತ್ತಿರುವುದು, ರಾಮನಾಥಪುರ ಕಾಲೇಜಿ ನಲ್ಲಿ  ಪ್ರಯೋಗಾಲಯ ಉದ್ಘಾಟನೆ ಯಾಗಿರುವುದು, ಬಸವಾಪಟ್ಟಣ ಕಾಲೇಜಿನಲ್ಲಿ ಸುಸಜ್ಜಿತ ಗ್ರಂಥಾಲಯ ಮತ್ತು ಪ್ರಯೋಗಾಲಯ ಅಸ್ತಿತ್ವಕ್ಕೆ ಬರುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಈರಪ್ಪ, ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಬಸವರಾಜು, ಸಿಡಿಸಿ ಉಪಾಧ್ಯಕ್ಷ ಎಸ್.ಸಿ.ಚೌಡೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಿಕ್ಕಣ್ಣಶೆಟ್ಟಿ, ಕೃಷ್ಣಮೂರ್ತಿ, ಪ್ರಭಾಕರ್, ಮುಖಂಡರಾದ ಸಾದಿಕ್ ಸಾಬ್, ಬಿಳಗುಲಿ ಪುಟ್ಟರಾಜು, ಹಂಪಾಪುರ ಸ್ವಾಮಿಗೌಡ, ರಾಮನಾಥಪುರ ಕಾಲೇಜಿನ ಪ್ರಾಂಶುಪಾಲ ಸಂಪತ್ತೇಗೌಡ, ಸಿಡಿಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !