ಟೆನಿಸ್ ಆಟಗಾರ್ತಿಗಿಂತ ಕುಳ್ಳಗೆ ಕಾಣದಿರಲು ಸಾಹಸ; ನಗೆಯುಕ್ಕಿಸಿದ ಕೊಹ್ಲಿ ನಡೆ

7

ಟೆನಿಸ್ ಆಟಗಾರ್ತಿಗಿಂತ ಕುಳ್ಳಗೆ ಕಾಣದಿರಲು ಸಾಹಸ; ನಗೆಯುಕ್ಕಿಸಿದ ಕೊಹ್ಲಿ ನಡೆ

Published:
Updated:
Deccan Herald

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆವರು ಹಲವು ಸಾಧನೆಗಳ ಎತ್ತರಕ್ಕೆ ಏರಿದವರು. ಆದರೆ, ಈಚೆಗೆ ಬಾಂದ್ರಾದಲ್ಲಿ ನಡೆದ ಟಿಸ್ಸೋ ವಾಚ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಥಂಡಿ ಅವರ ಎತ್ತರಕ್ಕೆ ಸಮನಾಗಿ ನಿಲ್ಲಲು ಪರದಾಡಿದರು!

ವಿರಾಟ್ ಅವರು ಆರು ಅಡಿ ಎತ್ತರದ ಕರ್ಮನ್ ಕೌರ್‌ ಅವರನ್ನು ವೇದಿಕೆಗೆ ಕರೆದು ಕೈಗಡಿಯಾರ ಕಾಣಿಕೆ ನೀಡಿದರು. ಫೋಟೊ ತೆಗೆಸಿಕೊಳ್ಳಲು ನಿಲ್ಲುವಾಗ ಕೊಹ್ಲಿ ಅವರು ಕರ್ಮನ್ ಅವರನ್ನು ವೇದಿಕೆ ಪಕ್ಕದಲ್ಲಿ ನಿಲ್ಲಿಸಿ ತಾವು ಒಂದು ಮೆಟ್ಟಿಲು ಮೇಲೆ ಹತ್ತಿದರು. ಅದರೊಂದಿಗೆ ಎತ್ತರ ಸರಿದೂಗಿಸಿಕೊಂಡರು. ಇದು ಸಭಿಕರಲ್ಲಿ ನಗೆ ಉಕ್ಕಿಸಿತು.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಅವರ ಈ ನಡೆಯು ತೀವ್ರ ಟೀಕೆಗೆ ಒಳಗಾಗಿದೆ. ‘ಮಹಿಳೆಗಿಂತ ಗಿಡ್ಡ ಕಾಣಬಾರದು ಎಂಬ ಪುರುಷ ಮನಸ್ಥಿತಿ ಕೊಹ್ಲಿಯನ್ನೂ ಬಿಟ್ಟಿಲ್ಲ’ ಎಂದು ಟ್ವಿಟರ್‌ನಲ್ಲಿ ಅನೇಕರು ಚಾಟಿ ಬೀಸಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !