ಜಮಖಂಡಿ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ ವಂಚಿತರ ಅಸಮಾಧಾನ

7
ಜಮಖಂಡಿ ಉಪಚುನಾವಣೆ: ಬೆಂಬಲಿಗರೊಂದಿಗೆ ಬೆಳಗಲಿ ಸಭೆ ನಾಳೆ

ಜಮಖಂಡಿ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ ವಂಚಿತರ ಅಸಮಾಧಾನ

Published:
Updated:

ಬಾಗಲಕೋಟೆ: ಜಮಖಂಡಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದರೂ ಟಿಕೆಟ್ ಕೈತ‍ಪ್ಪುವುದು ಖಚಿತವಾಗುತ್ತಿದ್ದಂತೆಯೇ ಎರಡೂ ಪಕ್ಷಗಳಲ್ಲಿನ ಆಕಾಂಕ್ಷಿಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

’ಬೆಂಬಲಿಗರೊಂದಿಗೆ ಅಕ್ಟೋಬರ್ 13ರಂದು ಸಭೆ ನಡೆಸುವೆ’ ಎಂದು ಹೇಳಿರುವ ಜಮಖಂಡಿಯ ಕಾಂಗ್ರೆಸ್ ಮುಖಂಡ ಸುಶಿಲ್ ಕುಮಾರ ಬೆಳಗಲಿ, ಉಪಚುನಾವಣೆಯಲ್ಲಿ ತಮಗೆ ಟಿಕೆಟ್ ಕೈ ತಪ್ಪಿರುವ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ಬಿಜೆಪಿಯ ರಾಜ್ಯ ಕಬ್ಬು ಬೆಳೆಗಾರರ ಪ್ರಕೋಷ್ಠದ ಅಧ್ಯಕ್ಷ ಸ್ಥಾನಕ್ಕೆ ಮುಖಂಡ ಬಸವರಾಜ ಎಸ್.ಸಿಂಧೂರ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ವಿಡಿಯೊ ಸಂದೇಶ: ಸದ್ಯ ಮಣಿಪುರ ಪ್ರವಾಸದಲ್ಲಿರುವ ಸುಶಿಲ್‌ಕುಮಾರ ಬೆಳಗಲಿ ಅಲ್ಲಿಂದಲೇ ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಲ್ಲವೇ ಬಿಡುವ ವಿಚಾರವನ್ನು ಬೆಂಬಲಿಗರ ಮರ್ಜಿಗೆ ಬಿಟ್ಟಿರುವುದಾಗಿ ಅದರಲ್ಲಿ ಹೇಳಿದ್ದಾರೆ.

’ನಾನು ಸ್ವಾತಂತ್ರ್ಯ ಹೋರಾಟಗಾರ ಕುಟುಂಬದಿಂದ ಬಂದಿದ್ದೇನೆ. ಅಜ್ಜ, ಅಪ್ಪನ ಕಾಲದಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಈ ಹಿಂದೆ ಪಕ್ಷ ಯಾರಿಗೆ ಟಿಕೆಟ್ ನೀಡಿತ್ತೊ ಅವರನ್ನು ಗೆಲ್ಲಿಸಲು ಶ್ರಮವಹಿಸಿದ್ದೇವೆ. ಈಗ ನಮಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

’ಈ ವಿಚಾರದಲ್ಲಿ ಬೆಂಬಲಿಗರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಶನಿವಾರ ಜಮಖಂಡಿಯಲ್ಲಿ ಅವರೊಂದಿಗೆ ಸಭೆ ನಡೆಸಲಿದ್ದೇನೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅಲ್ಲಿ ಒತ್ತಡ ಬಂದಲ್ಲಿ ನಿಲ್ಲುತ್ತೇನೆ. ತಟಸ್ಥವಾಗಿರಿ ಎಂದರೆ ಸುಮ್ಮನಿರುತ್ತೇನೆ’ ಎಂದು ಬೆಳಗಲಿ ಹೇಳಿದ್ದಾರೆ. ಇದು ಜಮಖಂಡಿ ಕಾಂಗ್ರೆಸ್ ವಲಯದಲ್ಲಿ ಸಂಚಲನೆಗೆ ಕಾರಣವಾಗಿದೆ.

ರಾಜೀನಾಮೆ ಸಲ್ಲಿಕೆ ಇಂದು:

’ಜಮಖಂಡಿ ಕ್ಷೇತ್ರದಲ್ಲಿನ ಸದ್ಯದ ಬಿಜೆಪಿ ಇತಿಹಾಸವನ್ನು ಯಡಿಯೂರಪ್ಪ ಹಾಗೂ ಆರ್.ಅಶೋಕ್ ಎದುರು ಬಿಚ್ಚಿಟ್ಟಿರುವೆ. ಅವರೂ ಅಸಹಾಯಕರಾಗಿದ್ದರು. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರು ಎಂಬಂತಾಗಿದೆ. ತತ್ವ ಸಿದ್ಧಾಂತದ ಬದಲು ಗುಂಪೊಂದರ ಹಿಡಿತಕ್ಕೆ ಪಕ್ಷ ಸಿಲುಕಿದೆ’ ಎಂದು ಬಿ.ಎಸ್.ಸಿಂಧೂರ ಆಕ್ರೋಶ ವ್ಯಕ್ತಪಡಿಸಿದರು.

’ವರಿಷ್ಠರ ನಡೆಯಿಂದ ಬೇಸತ್ತು ಕಬ್ಬು ಬೆಳೆಗಾರರ ಪ್ರಕೋಷ್ಠಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸುವೆ ಎಂದು ಹೇಳಿದ ಸಿಂಧೂರ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ, ಇಲ್ಲವೇ ಬಿಡುವ ವಿಚಾರದ ಬಗ್ಗೆ ಎರಡು ದಿನಗಳಲ್ಲಿ ಬೆಂಬಲಿಗರ ಸಭೆ ಕರೆದು ತೀರ್ಮಾನಿಸುವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

’ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಗಮೇಶ ನಿರಾಣಿ ಸ್ಪರ್ಧೆಯಿಂದ ಪಕ್ಷದ ಅಭ್ಯರ್ಥಿಗೆ ಸೋಲುಂಟಾಗಿದ್ದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !