ಭಾನುವಾರ, ಡಿಸೆಂಬರ್ 8, 2019
20 °C

ಟಿಸಿಎಸ್‌: ₹ 7901 ಕೋಟಿ ನಿವ್ವಳ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮುಂಬೈ: ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), ಜುಲೈ – ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 7,901 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 6,446 ಕೋಟಿ ನಿವ್ವಳ ಲಾಭ ಗಳಿಸಿತ್ತು. ಡಿಜಿಟಲ್‌ ಸೇವೆಗೆ ಬೇಡಿಕೆ ಹೆಚ್ಚಿದ್ದರಿಂದ ನಿವ್ವಳ ಲಾಭವು ಶೇ 22.6ರಷ್ಟು ಏರಿಕೆ ಕಂಡಿದೆ. ದ್ವಿತೀಯ ತ್ರೈಮಾಸಿಕದಲ್ಲಿ ವರಮಾನ ಹೆಚ್ಚಳವು ಶೇ 20.7ರಷ್ಟು ಏರಿಕೆ ಕಂಡು ₹ 36,854 ಕೋಟಿಗಳಿಗೆ ತಲುಪಿದೆ.

‘ಬ್ಯಾಂಕಿಂಗ್‌, ಹಣಕಾಸು ಸೇವೆ, ವಿಮೆ ಮತ್ತು ರಿಟೇಲ್‌ ಕ್ಷೇತ್ರಗಳಲ್ಲಿನ ವಹಿವಾಟು ಏರಿಕೆಯ ಕಾರಣಕ್ಕೆ ಈ ತ್ರೈಮಾಸಿಕದಲ್ಲಿನ ನಮ್ಮ ಒಟ್ಟಾರೆ ಹಣಕಾಸು ಸಾಧನೆಯು ತೃಪ್ತಿಕರವಾಗಿದೆ’ ಎಂದು ಸಂಸ್ಥೆಯ ಸಿಇಒ ರಾಜೇಶ್‌ ಗೋಪಿನಾಥನ್‌ ಹೇಳಿದ್ದಾರೆ.

ಮೂರು ತಿಂಗಳಲ್ಲಿ 10,227 ತಂತ್ರಜ್ಞರನ್ನು ನೇಮಿಸಿಕೊಳ್ಳಲಾಗಿದೆ. ಇದು 12 ತ್ರೈಮಾಸಿಕಗಳಲ್ಲಿನ ಗರಿಷ್ಠ ಮಟ್ಟವಾಗಿದೆ. ಸಂಸ್ಥೆಯ ಒಟ್ಟು ಸಿಬ್ಬಂದಿ ಸಂಖ್ಯೆ 4.11 ಲಕ್ಷಕ್ಕೆ ತಲುಪಿದೆ.

ಲಾಭಾಂಶ ಘೋಷಣೆ: ಸಂಸ್ಥೆಯು ಪ್ರತಿ ಷೇರಿಗೆ ₹ 4ರಂತೆ ಲಾಭಾಂಶ ಘೋಷಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು