ಶನಿವಾರ, ಫೆಬ್ರವರಿ 22, 2020
19 °C

ಮತದಾರ ಪಟ್ಟಿ ಪರಿಷ್ಕರಣೆ ಆರಂಭ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ‘ಚುನಾವಣಾ ಆಯೋಗದ ನಿರ್ದೇಶದ ಅನ್ವಯ ಜಿಲ್ಲೆಯಲ್ಲಿ ಜಮಖಂಡಿ ಮತಕ್ಷೇತ್ರ ಹೊರತುಪಡಿಸಿ ಉಳಿದ 6 ಮತಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣ ಕಾರ್ಯ ಆರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು 2019ರ ಜನವರಿ 1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವೇಳಾ ಪಟ್ಟಿಯನ್ನು ಹೊರಡಿಸಿದೆ. ಕರಡು ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ್ 20 ವರಗೆ ಸ್ವೀಕರಿಸಲಾಗುತ್ತದೆ’ ಎಂದರು.

‘ಈಗಾಗಲೇ ಅಕ್ಟೋಬರ್ 10 ರಂದು ಕರಡು ಮತದಾರ ಪಟ್ಟಿಯನ್ನು ಆಯಾ ಮತಕ್ಷೇತ್ರಗಳಲ್ಲಿ ಸಿದ್ಧಪಡಿಸಲಾಗಿದೆ. 2019ರ ಜನೇವರಿ 1ಕ್ಕೆ ಇರುವಂತೆ 18 ವರ್ಷ ಮೇಲ್ಪಟ್ಟವರು ತಮ್ಮ ಹೆಸರನ್ನು ನಿಗದಿತ ನಮೂನೆ ನಂ.6 ರಲ್ಲಿ ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಸಂಬಂಧಪಟ್ಟ ತಹಶೀಲ್ದಾರರಿಗೆ ಇತ್ತೀಚಿನ ಪಾಸ್‌ಪೋರ್ಟ್ ಸೈಜ್‌ನ ಫೊಟೊ, ವಿಳಾಸ ಹಾಗೂ ವಯಸ್ಸಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ’ ಎಂದರು.

‘ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ 7, ಮತದಾರರ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಹಾಗೂ ವಿವರಗಳಲ್ಲಿ ದೋಷಗಳಿದ್ದಲ್ಲಿ ತಿದ್ದುಪಡಿ ಮಾಡಲು ನಮೂನೆ 8 ಹಾಗೂ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳಾಂತರ ಮಾಡಬೇಕಾದಲ್ಲಿ ನಮೂನೆ 8ಎ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದ ಅವರು, ಈ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷದವರು ವಿಧಾನಸಭಾ ಮತಕ್ಷೇತ್ರವಾರು ಎಲ್ಲ ಮತಗಟ್ಟೆಗಳಿಗೆ ಬಿ.ಎಲ್.ಎ ಅವರನ್ನು ನೇಮಕಾತಿ ಮಾಡಿ ಆಯಾ ತಹಶೀಲ್ದಾರವರಿಗೆ ಯಾದಿಯನ್ನು ಕಳುಹಿಸಬೇಕು. ಅಲ್ಲದೇ ಬಿ.ಎಲ್.ಎಗಳು ಆಯಾ ಮತಗಟ್ಟೆಯ ಮತದಾರರಾಗಿರಬೇಕು. ಪರಿಷ್ಕರಣೆ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷದವರು ಸಹಕರಿಸುವಂತೆ’ ಮನವಿ ಮಾಡಿದರು.

‘ನವೆಂಬರ್ 20 ರಿಂದ ಡಿಸೆಂಬರ್ 20 ವರೆಗೆ ಅರ್ಜಿಗಳ ಪರಿಷ್ಕರಣೆ ನಡೆಯಲಿದೆ.  ಅಂತಿಮ ಮತದಾರರ ಪಟ್ಟಿಯನ್ನು 2019ರ ಜನವರಿ 4ರಂದು ಪ್ರಕಟಿಸಲಾಗುತ್ತದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಅನಿಲ್‌ಕುಮಾರ ದಡ್ಡಿ, ಯಲ್ಲಪ್ಪ ಸಕ್ಯಾನವರ, ಸಲೀಂ ಮೋಮಿನ್ ಹಾಗೂ ನೂರ್‌ ಪಟ್ಟೇವಾಲೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು