ಶ್ರೀಲಂಕಾ: ಸಂಸತ್‌ ಅಮಾನತು ತೆರವು

7
ಬಿಕ್ಕಟ್ಟಿಗೆ ಅಂತ್ಯ ಹಾಡಲು ಸಂಸದರ ಸಭೆಗೆ ತೀರ್ಮಾನ

ಶ್ರೀಲಂಕಾ: ಸಂಸತ್‌ ಅಮಾನತು ತೆರವು

Published:
Updated:
Deccan Herald

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಸಂಸತ್ತನ್ನು ಅಮಾನತುಗೊಳಿಸಿದ್ದ ತೀರ್ಮಾನವನ್ನು ಗುರುವಾರ ಹಿಂದಕ್ಕೆ ಪಡೆದಿದ್ದಾರೆ. ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ಹಠಾತ್‌ ಪದಚ್ಯುತಗೊಳಿಸಿದ ನಂತರ ದೇಶದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಹಾಡಲು, ಇದೇ ಸೋಮವಾರ ಸಂಸದರ ಸಭೆಯನ್ನು ಅವರು ಕರೆದಿದ್ದಾರೆ.

ಸಿಂಘೆ ಅವರ ವಿರುದ್ಧ ಕಳೆದ ಶುಕ್ರವಾರ ಈ ಕ್ರಮ ಕೈಗೊಂಡಿದ್ದ ಸಿರಿಸೇನ, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಆ ಸ್ಥಾನಕ್ಕೆ ನೇಮಿಸಿದ್ದರು. ಅಲ್ಲದೆ ಇದೇ 16 ರವರೆಗೂ ಸಂಸತ್‌ ಅನ್ನು ಅಮಾನತಿನಲ್ಲಿ ಇರಿಸಿದ್ದರು. 225 ಸದಸ್ಯ ಬಲದ ಸಂಸತ್ತಿನಲ್ಲಿ 113 ಮಂದಿಯ ಸರಳ ಬಹುಮತಕ್ಕೆ ಪೂರಕವಾಗಿ, ಸಿಂಘೆ ಬೆಂಬಲಿಗರನ್ನು ರಾಜ‍ಪ‍ಕ್ಸೆ ಅವರ ಕಡೆ ಸೆಳೆಯಲು ಸಮಯಾವಕಾಶ ಪಡೆಯುವ ಇರಾದೆ ಇದರ ಹಿಂದಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬಹುಮತ ಸಾಬೀತು ಮಾಡುತ್ತೇನೆ: ‘ಸಂಸತ್ತಿನ ಮೇಲೆ ನನಗೆ ಭರವಸೆ ಇದ್ದು, ಬಹುಮತ ಸಾಬೀತು ಮಾಡುತ್ತೇನೆ. ರಾಜಪಕ್ಸೆ ಅವರನ್ನು ಅಧ್ಯಕ್ಷ ಸಿರಿಸೇನ ಪ್ರಧಾನಿ ಹುದ್ದೆಗೆ ನೇಮಕ ಮಾಡಿದ್ದರೂ ಈ ಭರವಸೆ ಹೊಂದಿದ್ದೇನೆ’ ಎಂದು ಪದಚ್ಯುತ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !