ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಜೆಎಫ್‌ಸಿಗೆ ಮಣಿದ ಗೋವಾ

7

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಜೆಎಫ್‌ಸಿಗೆ ಮಣಿದ ಗೋವಾ

Published:
Updated:
Deccan Herald

ಜಮ್‌ಶೆಡ್‌ಪುರ: ಬಲಿಷ್ಠ ಗೋವಾ ತಂಡವನ್ನು ಜೆಮ್‌ಶೆಡ್‌ಪುರ ಎಫ್‌ಸಿ ತಂಡದವರು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮಣಿಸಿದರು. ಇಲ್ಲಿನ ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಜೆಎಫ್‌ಸಿ ತಂಡ 4-1 ಗೋಲುಗಳಿಂದ ಗೆದ್ದಿತು.

ಎರಡು ಗೋಲು ಗಳಿಸಿ ಮೈಕೆಲ್ ಸುಸೈರಾಜ್ ಮತ್ತು ತಲಾ ಒಂದೊಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ ಮೆಮೊ ಹಾಗೂ ಸುಮೀತ್ ಪಸಿ ಜೆಎಫ್‌ಸಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಯದ ನಾಗಾಲೋಟದಲ್ಲಿದ್ದ ಗೋವಾಗೆ ಈ ಸೋಲು ಆಘಾತ ನೀಡಿತು.

ಪ್ರಥಮಾರ್ಧದಲ್ಲಿ ಎರಡೂ ತಂಡಗಳು ಸಮಬಲದಿಂದ ಕಾದಾಡಿದವು. 17ನೇ ನಿಮಿಷದಲ್ಲಿ ಸುಸೈರಾಜ್‌ ಗಳಿಸಿದ ಗೋಲಿಗೆ 33ನೇ ನಿಮಿಷದಲ್ಲಿ ಮೊರ್ತಾಡ ಫಾಲ್ ಮೂಲಕ ಗೋವಾ ತಿರುಗೇಟು ನೀಡಿತು. ಆದರೆ ದ್ವಿತೀಯಾರ್ಧದಲ್ಲಿ ಜೆಎಫ್‌ಸಿ ಆಧಿಪತ್ಯ ಸ್ಥಾಪಿಸಿತು.

ದ್ವಿತೀಯಾರ್ಧದ ಐದನೇ ನಿಮಿಷದಲ್ಲಿ ಸುಸೈರಾಜ್‌ ಗಳಿಸಿದ ಗೋಲು ಜೆಎಫ್‌ಸಿಗೆ ಮುನ್ನಡೆ ತಂದುಕೊಟ್ಟಿತು. ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಗೋವಾಗೆ 77ನೇ ನಿಮಿಷದಲ್ಲಿ ಮೆಮೊ ಆಘಾತ ನೀಡಿದರು. 78ನೇ ನಿಮಿಷದಲ್ಲಿ ಸುಮೀತ್ ಗೋಲು ಗಳಿಸುತ್ತಿ
ದ್ದಂತೆ ಗೋವಾ ತಂಡದ ಜಂಘಾಬಲವೇ ಉಡುಗಿ ಹೋಯಿತು. ಅಂತಿಮ ಹಂತದಲ್ಲಿ ತಿರುಗೇಟು ನೀಡಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !