ಬುಧವಾರ, ಡಿಸೆಂಬರ್ 11, 2019
27 °C

ಗಾಂಧಿವಾದಿ ಎನ್.ವಿ.ಕೃಷ್ಣಮಾಚಾರ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಗಾಂಧಿವಾದಿ ಎನ್.ವಿ.ಕೃಷ್ಣಮಾಚಾರ್ (102) ಅವರು ಬುಧವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬೆಂಗಳೂರು ಕೇಂಪೇಗೌಡ ನಗರದಲ್ಲಿ ಪುತ್ರಿ ಮನೆಯಲ್ಲಿ ವಾಸವಾಗಿದ್ದರು. ಗುರುವಾರ ಬೆಳಿಗ್ಗೆ 9 ರಿಂದ 10ರ ವರೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಾಗೇಪಲ್ಲಿಯ ವೆಂಕಟರಾಮಚಾರಿ ಮತ್ತು ನರಸಮ್ಮ ದಂಪತಿ ಪುತ್ರರಾಗಿ 1917ರಲ್ಲಿ ಜನಿಸಿದ ಕೃಷ್ಣಮಾಚಾರ್ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಿಕೊಂಡರು. ಶಿವಪುರದ ಧ್ವಜ ಸತ್ಯಾಗ್ರಹ, ಎರಡನೇ ಜಲಿಯನ್ ವಾಲಾಬಾಗ್ ಎಂದೇ ಬಣ್ಣಿಸುವ ವಿಧುರಾಶ್ವತ್ಥ ಸತ್ಯಾಗ್ರಹ, ಈಸ್ಟ್ ಇಂಡಿಯಾ ಚಳವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಸೆರೆವಾಸ ಕೂಡ ಅನುಭವಿಸಿದವರು.

ಮಹಾತ್ಮಗಾಂಧಿಯವರ ಅನುಯಾಯಿಯಾಗಿ ಅವರ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಕೃಷ್ಣಮಾಚಾರ್ ಅವರು ಕೊನೆಯವರೆಗೂ ಗಾಂಧೀಜಿ ಅವರ ತತ್ವ, ಸಿದ್ಧಾಂತಗಳ ನೆರಳಿನಲ್ಲಿಯೇ ಬದುಕಿ ಗಡಿ ನಾಡಿನ ಗಾಂಧಿ ಎಂದೇ ಜಿಲ್ಲೆಯಲ್ಲಿ ಖ್ಯಾತರಾಗಿದ್ದರು.

ಬದುಕಿನುದ್ದಕ್ಕೂ ಸಾಮಾಜಿಕ ಕಾಳಜಿಯಿಂದಲೇ ಬದುಕಿದ ಕೃಷ್ಣಮಾಚಾರ್ ಅವರು ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನವೆಂಬರ್ 19 ರಂದು ದೇಹದಾನಕ್ಕೆ ನೋಂದಣಿ ಮಾಡಿಸಿದ್ದರು. ಆ ಮೂಲಕ ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರಿಗೆ ಸಾಹಿತಿ ಓಂಕಾರಪ್ರಿಯ ಸೇರಿದಂತೆ ಐದು ಪುತ್ರರು, ಮೂರು ಪುತ್ರಿಯರು ಇದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು