ಸಾಲ ವಿತರಣೆ: ಸಂಸದ ಮುನಿಯಪ್ಪ ಆಕ್ಷೇಪ

7

ಸಾಲ ವಿತರಣೆ: ಸಂಸದ ಮುನಿಯಪ್ಪ ಆಕ್ಷೇಪ

Published:
Updated:
Deccan Herald

ಕೋಲಾರ: ಜಿಲ್ಲಾಡಳಿತವು ತಾಲ್ಲೂಕಿನ ನರಸಾಪುರ ಬಳಿ ಶನಿವಾರ ಒಂದೇ ವೇದಿಕೆಯಲ್ಲಿ ಕೆ.ಸಿ ವ್ಯಾಲಿ ಪಂಪ್‌ಹೌಸ್ ಉದ್ಘಾಟನೆ ಹಾಗೂ ಡಿಸಿಸಿ ಬ್ಯಾಂಕ್‌ನ ಸಾಲ ವಿತರಣೆ ಸಮಾರಂಭ ಹಮ್ಮಿಕೊಂಡಿದ್ದಕ್ಕೆ ಸಂಸದ ಕೆ.ಎಚ್‌.ಮುನಿಯಪ್ಪ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ಸಮಾರಂಭ ಆರಂಭವಾಗಿ ಸ್ವಲ್ಪ ಸಮಯದ ಬಳಿಕ ಭಾಷಣ ಆರಂಭಿಸಿದ ಮುನಿಯಪ್ಪ, ‘ಕೆ.ಸಿ ವ್ಯಾಲಿ ಪಂಪ್‌ಹೌಸ್ ಉದ್ಘಾಟನೆಯು ಸರ್ಕಾರಿ ಕಾರ್ಯಕ್ರಮ. ಹೀಗಾಗಿ ಡಿಸಿಸಿ ಬ್ಯಾಂಕ್‌ ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸುವ ಸಮಾರಂಭವನ್ನು ಸರ್ಕಾರಿ ಕಾರ್ಯಕ್ರಮದ ಜತೆ ಆಯೋಜಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ‘ಎರಡೂ ಕಾರ್ಯಕ್ರಮಗಳನ್ನು ಒಟ್ಟಿಗೆ ಆಯೋಜಿಸುವಂತೆ ಅಧಿಕಾರಿಗಳಿಗೆ ನಾನೇ ಸೂಚಿಸಿದ್ದೆ. ಇದು ತಪ್ಪಲ್ಲ’ ಎಂದು ತಮ್ಮ ಕ್ರಮ ಸಮರ್ಥಿಸಿಕೊಂಡರು.

‘ಜಿಲ್ಲೆಯ ರೈತರ ಬದುಕಿಗಾಗಿ ಅಂತರ್ಜಲ ವೃದ್ದಿಸಲು ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ನೀರು ಸಿಕ್ಕರೂ ಬೆಳೆ ಬೆಳೆಯಲು ಹಣಕ್ಕಾಗಿ ಪರದಾಡುವ ರೈತರು ಮತ್ತು ರೈತ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತಿದೆ. ಈ ಎರಡೂ ಕಾರ್ಯಕ್ರಮಗಳು ಒಟ್ಟಿಗೆ ನಡೆಯುತ್ತಿರುವುದರಿಂದ ಜನರಿಗೆ ಕೆ.ಸಿ ವ್ಯಾಲಿ ಯೋಜನೆ ಬಗ್ಗೆ ಅರಿವು ಮೂಡಿಸಿದಂತೆ ಆಗಿದೆ’ ಎಂದು ಹೇಳಿದರು.

159 ಸ್ತ್ರೀಶಕ್ತಿ ಸಂಘಗಳಿಗೆ ₹ 6.98 ಕೋಟಿ ಬಡ್ಡಿರಹಿತ ಸಾಲ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !