ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ಆಳ –ಅಗಲ| ಕ್ರೀಡಾಪಟುವಿನ ಬದುಕು ನುಂಗುವ ಮದ್ದು: ಕ್ರೀಡೆಗೆ ಕಪ್ಪುಚುಕ್ಕೆ ಡೋಪಿಂಗ್

Published : 15 ಜನವರಿ 2026, 0:42 IST
Last Updated : 15 ಜನವರಿ 2026, 0:42 IST
ಫಾಲೋ ಮಾಡಿ
Comments
ಭಾರತವು ಜಾಗತಿಕ ಮಟ್ಟದಲ್ಲಿ ಕ್ರೀಡೆಯ ಶಕ್ತಿ ಕೇಂದ್ರವಾಗಿದೆ. ನಮ್ಮ ಕ್ರೀಡಾಪಟುಗಳು ಅಡೆತಡೆಗಳನ್ನು ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದ‌ಕಗಳನ್ನು ಪಡೆದಿದ್ದಾರೆ ಮತ್ತು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಉದ್ದೀಪನ ಮದ್ದಿನ ಬಳಕೆಯು ನ್ಯಾಯಯುತ ಆಟ, ಕ್ರೀಡಾಳುಗಳ ಆರೋಗ್ಯ ಮತ್ತು ದೇಶದ ಘನತೆಯ ಮೇಲೆ ಪರಿಣಾಮ ಬೀರುತ್ತದೆ. ನಿಷೇಧಿತ ಉದ್ದೀಪನ ಮದ್ದು ಸೇವನೆಯನ್ನು ಪತ್ತೆ ಮಾಡುವ ಉತ್ತಮ ಗುಣಮಟ್ಟದ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಅಧಿಕ ವೆಚ್ಚ, ಪರೀಕ್ಷೆಯಲ್ಲಿ ವಿಳಂಬ ಮತ್ತು ಇತರ ಏಜೆನ್ಸಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಕಿಟ್‌ಗಳು ಅಗ್ಗವಾದರೆ ತಳಮಟ್ಟದ ಕ್ರೀಡಾಕೂಟಗಳಿಂದ ಬಳಕೆಗೆ ಅನುಕೂಲವಾಗಬಹುದು.  
ಪಿ.ಟಿ. ಉಷಾ, ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ
ವಾಡಾವು ಪ್ರತಿಯೊಂದು ದೇಶಕ್ಕೂ ಒಂದೇ ಅಂತರರಾಷ್ಟ್ರೀಯ ಪ್ರಯೋಗಾಲಯ ಮಂಜೂರು ಮಾಡುತ್ತದೆ. ನಮ್ಮ ದೇಶದ ಪ್ರಯೋಗಾಲಯ ಚೆನ್ನಾಗಿದೆ. ಇಷ್ಟು ಪ್ರಕರಣಗಳು ವರದಿಯಾಗುತ್ತಿವೆ ಎಂದರೆ, ಅಷ್ಟು ಪರೀಕ್ಷೆಗಳು ಕಟ್ಟುನಿಟ್ಟಾಗಿ ನಡೆಯುತ್ತಿವೆ ಎಂದು ಅರ್ಥ. ಆದರೆ, ನಾಡಾದಲ್ಲಿ ಕಾರ್ಯನಿರ್ವಹಿಸಲು ನುರಿತ ಮತ್ತು ಪರಿಣತ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕಿದೆ. ಇದರಿಂದಾಗಿ ಮಾದರಿ ಸಂಗ್ರಹ, ಪರೀಕ್ಷೆಗಳ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ. ಎಲ್ಲದರೊಂದಿಗೆ ತಪ್ಪಿತಸ್ಥರಿಂದ ಕೇವಲ ಪದಕ ಕಿತ್ತುಕೊಳ್ಳುವುದಷ್ಟೇ ಶಿಕ್ಷೆಯಾಗಬಾರದು. ಅವರಿಗೆ ನೀಡಿರುವ ಎಲ್ಲ ಸೌಲಭ್ಯ ಮತ್ತು ಉದ್ಯೋಗಗಳನ್ನೂ ಕಿತ್ತುಕೊಳ್ಳಬೇಕು.
  ಡಾ.ಕಿರಣ ಕುಲಕರ್ಣಿ, ಎಎಫ್‌ಸಿ ಡೋಪಿಂಗ್ ನಿಯಂತ್ರಣ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT