ಬಿಎಸಿ, ಡಾಲ್ಫಿನ್ ಕ್ಲಬ್ಗಳಿಗೆ ಪ್ರಶಸ್ತಿ

ಪುತ್ತೂರು: ಬೆಂಗಳೂರಿನ ಬಸವನಗುಡಿ ಅಕ್ವೆಟಿಕ್ ಕ್ಲಬ್ ಮತ್ತು ಡಾಲ್ಫಿನ್ ಅಕ್ವೆಟಿಕ್ ಕ್ಲಬ್ ತಂಡಗಳು ಭಾನುವಾರ ಇಲ್ಲಿ ಮುಕ್ತಾಯವಾದ ರಾಜ್ಯ ಶಾರ್ಟ್ಕೋರ್ಸ್ ಈಜು ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದವು.
ಕರ್ನಾಟಕ ಈಜು ಸಂಸ್ಥೆಯು ಪುತ್ತೂರು ಅಕ್ವೆಟಿಕ್ ಕ್ಲಬ್ನ ಸಹಯೋಗದಲ್ಲಿ ಇಲ್ಲಿನ ಡಾ.ಶಿವರಾಮ ಕಾರಂತ ಬಾಲವನದ ಈಜುಕೊಳದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಎರಡು ಕ್ಲಬ್ಗಳ ಈಜುಪಟುಗಳು ಉತ್ತಮ ಸಾಧನೆ ಮಾಡಿದರು. ಸಬ್ ಜೂನಿಯರ್ ವಿಭಾಗದಲ್ಲಿ ಬಸವನಗುಡಿ ಅಕ್ವೆಟಿಕ್ ಕ್ಲಬ್ ಮತ್ತು ಜೂನಿಯರ್ ವಿಭಾಗದಲ್ಲಿ ಡಾಲ್ಫಿನ್ ಕ್ಲಬ್ ರನ್ನರ್ಸ್ ಅಪ್ ಆದವು.
ಭಾನುವಾರ ಒಟ್ಟು ಎರಡು ಹೊಸ ದಾಖಲೆ ನಿರ್ಮಾಣಗೊಂಡಿದ್ದು, ಬಾಲಕರ 50 ಮೀ. ಬ್ರೆಸ್ಟ್ಸ್ಟ್ರೋಕ್ನಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್ನ ವಿಧಿತ್ ಎಸ್.ಶಂಕರ್ 34.23 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಾಲಕಿಯರ 100 ಮೀ. ಬಟರ್ಫ್ಲೈನಲ್ಲಿ ಡಾಲ್ಫಿನ್ ಅಕ್ವೆಟಿಕ್ ಕ್ಲಬ್ನ ನೀನಾ ವೆಂಕಟೇಶ್ 1 ನಿಮಿಷ 5.3 ಸೆಕೆಂಡ್ನಲ್ಲಿ ಗುರಿ ತಲುಪಿ ಕೂಟ ದಾಖಲೆ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.