ಪಾಲಿಕೆಯಲ್ಲಿ ಭದ್ರೇಗೌಡರ ಗಣಹೋಮ

7

ಪಾಲಿಕೆಯಲ್ಲಿ ಭದ್ರೇಗೌಡರ ಗಣಹೋಮ

Published:
Updated:
Deccan Herald

ಬೆಂಗಳೂರು: ನೂತನ ಉಪಮೇಯರ್‌ ಭದ್ರೇಗೌಡ ಅವರು ತಮ್ಮ ಕಚೇರಿಯ ಪೀಠವೇರುವ ಮುನ್ನ ಗಣಹೋಮ ನಡೆಸಿದರು. 

ತಮ್ಮ ಕಚೇರಿಯೊಳಗೆ ಶಿವಪಾರ್ವತಿ, ಲಕ್ಷ್ಮೀ ಚಿತ್ರಗಳಿಗೆ ಅದ್ದೂರಿ ಪೂಜೆ ನಡೆಸಿದರು. ಬಳಿಕ ಅದೇ ಕೊಠಡಿಯಲ್ಲಿ ಗಣಹೋಮ ನಡೆಯಿತು. ಪುರೋಹಿತರು ವೇದ ಮಂತ್ರ ಪಠಿಸುತ್ತಾ ಪೂಜೆ ನಡೆಸಿದರು. ಹೋಮದ ನಂತರ ತಮ್ಮ ಆಸನಕ್ಕೂ ಪೂಜೆ ಸಲ್ಲಿಸಿದ ಭದ್ರೇಗೌಡ ಅದಕ್ಕೆ ಭಕ್ತಿಯಿಂದ ಕೈಮುಗಿದು ಕುಳಿತರು. ಬಳಿಕ ಅವರ ಬೆಂಬಲಿಗರು, ಅಭಿಮಾನಿಗಳು ಹೂಗುಚ್ಛ ನೀಡಿ ಅಭಿನಂದಿಸಿದರು. ಭದ್ರೇಗೌಡ ಅವರ ಪತ್ನಿ ಈ ಸಂದರ್ಭ ಹಾಜರಿದ್ದರು. 

ಯಾವುದೇ ವಿಘ್ನ ಬಾರದಿರಲಿ ಎಂದು ಭದ್ರೇಗೌಡ ಹೋಮ ಮಾಡಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದರು.

ವಿಶೇಷ ಪೂಜೆ, ಹೋಮಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಚಿವ ಎಚ್‌.ಡಿ.ರೇವಣ್ಣ ಪ್ರಾಶಸ್ತ್ಯ ನೀಡುತ್ತಾರೆ. ಉಪಮೇಯರ್‌ ಕೂಡಾ ತಮ್ಮ ಪಕ್ಷದ ಹಿರಿಯ ನಾಯಕರ ಮಾರ್ಗ ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಪಾಲಿಕೆ ವಲಯದಲ್ಲಿ ಕೇಳಿಬಂದಿವೆ. 

ಹೋಮಕ್ಕೆ ಅವಕಾಶವಿಲ್ಲ: ಸರ್ಕಾರಿ ಕಚೇರಿಗಳಲ್ಲಿ ಹೋಮ ಮಾಡಲು ಅವಕಾಶವಿಲ್ಲ. ಇದು ನಿಯಮದ ಉಲ್ಲಂಘನೆ. ಈ ಬಗ್ಗೆ ಉಪ ಮೇಯರ್‌ಗೆ ತಿಳಿಹೇಳುತ್ತೇನೆ ಎಂದು ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !