ಆರ್ಚರಿಪಟು ದೀಪಿಕಾ–ಅತನು ನಿಶ್ಚಿತಾರ್ಥ

7

ಆರ್ಚರಿಪಟು ದೀಪಿಕಾ–ಅತನು ನಿಶ್ಚಿತಾರ್ಥ

Published:
Updated:

ರಾಂಚಿ: ಒಲಿಂಪಿಯನ್ ಆರ್ಚರಿಪಟುಗಳಾದ ದೀಪಿಕಾಕುಮಾರಿ ಮತ್ತು ಅತನು ದಾಸ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವು ಸೋಮವಾರ ನಡೆಯಿತು.

ಇಲ್ಲಿಯ ರಾತು ಚೆಟ್ಟಿಯಲ್ಲಿರುವ ದೀಪಿಕಾಕುಮಾರಿ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಿತು. 24 ವರ್ಷದ ದೀಪಿಕಾ ಮತ್ತು 26 ವರ್ಷದ ದಾಸ್ ಅವರು ಪರಸ್ಪರ ನಿಶ್ಚಿತಾರ್ಥದ ಉಂಗುರ ಬದಲಿಸಿಕೊಂಡರು. ಉಭಯ ಕುಟುಂಬಗಳ ಸದಸ್ಯರು ಮತ್ತು  ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ, ಅವರ ಪತ್ನಿ ಮೀರಾ ಮುಂಡಾ ಅವರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೀಪಿಕಾ–ಅತನು, ‘2019ರ ನವೆಂಬರ್‌ನಲ್ಲಿ ಮದುವೆಯಾಗಲಿದ್ದೇವೆ. ಅದಕ್ಕೂ ಮುನ್ನ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಸ್ಪರ್ಧೆ ಸೇರಿದಂತೆ ಮಹತ್ವದ ಚಾಂಪಿಯನ್‌ಷಿಪ್‌ಗಲೂ ಇವೆ. ಆಧ್ದರಿಂದ ಸಮಯದ ಅಭಾವ ಇದೆ’ ಎಂದರು.

ವಿಶ್ವಕಪ್ ಆರ್ಚರಿ ಫೈನಲ್ಸ್‌ನಲ್ಲಿ ದೀಪಿಕಾ ಅವರು ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗಳಿಸಿದ್ದಾರೆ. ಸದ್ಯ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಪದಕ ಗೆಲ್ಲುವಲ್ಲಿ ಸಫಲರಾಗಿರಲಿಲ್ಲ. ಈಚೆಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು.

ಕೋಲ್ಕತ್ತದ ಅತನು ದಾಸ್ ಅವರು ಪುರುಷರ ರಿಕರ್ವ್ ತಂಡದ ಪ್ರಮುಖ ಬಿಲ್ಲುಗಾರರಾಗಿದ್ದಾರೆ. ಆದರೆ ಈಚೆಗೆ ಏಷ್ಯನ್ ಗೇಮ್ಸ್‌ನಲ್ಲಿ ಅವರು ಸ್ಪರ್ಧಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !