ಕರ್ನೂಲು (ಆಂಧ್ರಪ್ರದೇಶ): ಮಾಜಿ ಪ್ರಿಯಕರನ ಪತ್ನಿಗೆ ಎಚ್ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ನೀಡಿದ ಆರೋಪದಡಿ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಕರ್ನೂಲು ನಿವಾಸಿ ಬಿ. ಬೋಯ ವಸುಂಧರಾ (34), ಖಾಸಗಿ ಆಸ್ಪತ್ರೆಯ ನರ್ಸ್ ಕೊಂಗೆ ಜ್ಯೋತಿ(40) ಮತ್ತು ಅವರ ಇಬ್ಬರು ಮಕ್ಕಳು ಬಂಧಿತ ಆರೋಪಿಗಳು.

ಮಾಜಿ ಪ್ರಿಯಕರನು ವೈದ್ಯೆಯೊಬ್ಬರನ್ನು ಮದುವೆಯಾಗಿರುವುದನ್ನು ಸಹಿಸದ ಆರೋಪಿ ವಸುಂಧರಾ ಎಚ್ಐವಿ ಸೋಂಕಿತರ ರಕ್ತವಿದ್ದ ಇಂಜೆಕ್ಷನ್ ನೀಡಿ ಅವರನ್ನು ದೂರ ಮಾಡಲು ಯತ್ನಿಸಿದ್ದಾರೆ.

ಸಂತ್ರಸ್ತೆಯು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಮೋಟಾರು ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಗುದ್ದಿದ್ದಾರೆ. ಕೆಳಗೆ ಬಿದ್ದು ಗಾಯಗೊಂಡಿದ್ದ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಆರೋಪಿ ವಸುಂಧರಾ, ಆಟೊ ರಿಕ್ಷಾದಲ್ಲಿ ಕೂರಿಸಲು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅನುಮಾನಗೊಂಡ ಸಂತ್ರಸ್ತೆ ಕಿರುಚಾಡಿದ್ದಾರೆ. ಸ್ಥಳದಿಂದ ಪರಾರಿಯಾಗುವ ಮೊದಲು ಆರೋಪಿ ವಸುಂಧರಾ ಸಂತ್ರಸ್ತೆಗೆ ಎಚ್ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ಅನ್ನು ಚುಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದ ವ್ಯಕ್ತಿಗಳಿಂದ ಆರೋಪಿಗಳು ಎಚ್ಐವಿ ಸೋಂಕಿತ ರಕ್ತವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.