ಗುವಾಹಟಿ: ಭಾರತ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು 20 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 153 ರನ್ಗಳಿಸಿದೆ. ಟೀಂ ಇಂಡಿಯಾಕ್ಕೆ 154 ರನ್ ಗುರಿ ನೀಡಿದೆ.

ಗುವಾಹಟಿಯ ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಜರುಗುತ್ತಿದೆ.

ನ್ಯೂಜಿಲೆಂಡ್ ಆರಂಭಿಕ ಆಟಗಾರರಾದ ಡೆವೊನ್ ಕಾನ್ವೇ ( 1 ರನ್), ಟಿಮ್ ಸೀಫರ್ಟ್ ( 12 ರನ್) ವೈಫಲ್ಯ ಅನುಭವಿಸಿದರು. ಉತ್ತಮ ಲಯದಲ್ಲಿದ್ದ ರಚಿನ್ ರವೀಂದ್ರ ಕೂಡ ಕೇವಲ 4 ರನ್ ಗಳಿಸಿ, ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

34 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಗ್ಲೆನ್ ಫಿಲಿಪ್ಸ್ (48 ರನ್) ಹಾಗೂ ಮಾರ್ಕ್ ಚಾಪ್ಮನ್ (32 ರನ್) ಆಸರೆಯಾದರು.

ಭಾರತದ ಪರ ಬೂಮ್ರಾ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಹಾಗೂ ರವಿ ಬಿಷ್ಣೋಯಿ ತಲಾ 2 ವಿಕೆಟ್ ಕಬಳಿಸಿದರು.

ಭಾರತವು ಸರಣಿಯಲ್ಲಿ 2-0 ಅಲ್ಲಿ ಮುನ್ನಡೆಯಲ್ಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶಪಡಿಸಿಕೊಳ್ಳುವ ಗುರಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.