ರಾಜಕಾರಣದಲ್ಲಿ ಮೂಲೆಗುಂಪಾಗುತ್ತಿರುವ ಮಹಿಳೆ: ಮೋಟಮ್ಮ ಬೇಸರ

7
ಸಮಾನತೆ, ಸ್ವಾತಂತ್ರ್ಯ, ಹಕ್ಕು: ಮಹಿಳಾ ನೆಲೆ’ ಕಾರ್ಯಗಾರ;

ರಾಜಕಾರಣದಲ್ಲಿ ಮೂಲೆಗುಂಪಾಗುತ್ತಿರುವ ಮಹಿಳೆ: ಮೋಟಮ್ಮ ಬೇಸರ

Published:
Updated:
Deccan Herald

ಮಂಡ್ಯ: ‘ಪುರುಷ ಪ್ರಧಾನ ರಾಜಕಾರಣದಲ್ಲಿ ಮಹಿಳೆಯನ್ನು ಮೂಲೆಗುಂಪು ಮಾಡಲಾಗುತ್ತಿದೆ. ಹಣಬಲ ತೋಳ್ಬಲ ಹೊಂದಿರುವ ಪುರುಷರು ಮಹಿಳೆಯರನ್ನು ಹೆಜ್ಜೆಹೆಜ್ಜೆಗೂ ತಡೆಯುತ್ತಿದ್ದಾರೆ. ಮಹಿಳಾ ಅಭ್ಯರ್ಥಿಗೆ ಮಹಿಳೆಯರೇ ಪ್ರೋತ್ಸಾಹ ನೀಡುತ್ತಿಲ್ಲ’ ಎಂದು ಕಾಂಗ್ರೆಸ್‌ ನಾಯಕಿ ಮೋಟಮ್ಮ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಂಘ, ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸೋಮವಾರ ನಡೆದ ‘ಸಮಾನತೆ, ಸ್ವಾತಂತ್ರ್ಯ ಮತ್ತು ಹಕ್ಕುಗಳು: ಮಹಿಳಾ ನೆಲೆಯಲ್ಲಿ' ವಿಷಯ ಕುರಿತ ಒಂದು ದಿನದ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮಹಿಳೆಗೆ ಅಪಾರ ನಾಯಕತ್ವ ಗುಣ ಇದ್ದರೂ ಆಕೆ ರಾಜಕೀಯವಾಗಿ ನೆಲೆ ನಿಲ್ಲಲು ಸೂಕ್ತ ಅವಕಾಶ ದೊರೆಯುತ್ತಿಲ್ಲ. ಸಿಕ್ಕ ಅವಕಾಶಗಳನ್ನು ತಪ್ಪಿಸುವ ಯತ್ನಗಳೇ ನಡೆಯುತ್ತಿವೆ. ಸಮರ್ಥ ಸಮಾಜ ಕಟ್ಟುವ ಉದ್ದೇಶದಿಂದ ಮಹಿಳೆಯರು ರಾಜಕಾರಣದಲ್ಲಿ ಪ್ರಾಧಾನ್ಯತೆ ಪಡೆಯಬೇಕು. ಮಹಿಳೆಯರನ್ನು ಒಟ್ಟುಗೂಡಿಸುವ ಹಾಗೂ ಆರ್ಥಿಕವಾಗಿ ಬಲ ನೀಡುವ ಸಲುವಾಗಿ ಸ್ತ್ರೀ ಶಕ್ತಿ ಸಂಘಗಳ ಯೋಜನೆ ಜಾರಿಗೆ ತರಲಾಗಿತ್ತು. ಆದರ ಈಗ ಮಹಿಳಾ ಸಂಘಗಳಲ್ಲೂ ಪುರುಷರ ಹಸ್ತಕ್ಷೇಪ ಉಂಟಾಗಿದೆ. ಪುರುಷ ಪ್ರಧಾನ ಚುನಾವಣಾ ವ್ಯವಸ್ಥೆಯಲ್ಲಿ ಹಣ ಹಂಚಿಕೆ ಮಾಡಿಲು ಮಾತ್ರ ಮಹಿಳಾ ಸಂಘಟನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲ ಮಹಿಯರೂ ಸಂಘದಿಂದ ಸಂಘಕ್ಕೆ ಸಂಘಕ್ಕೆ ಹಾರುತ್ತಿದ್ದಾರೆ. ಕೇವಲ ಸಾಲ ಸೌಲಭ್ಯ ಪಡೆಯುವ ಉದ್ದೇಶಕ್ಕಾಗಿಯೇ ಸಂಘದಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ಹೇಳಿದರು.

‘ವಿದ್ಯಾರ್ಥಿನಿಯರು ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಗಮನಹರಿಸಬೇಕು. ರಾಜಕಾರಣದ ತಿಳಿವಳಿಕೆ ಹೊಂದಬೇಕು. ಪ್ರತಿ ದಿನ ಪೋಷಕರಿಂದ ಪಡೆಯುವ ದಿನದ ಖರ್ಚಿನ ಒಂದು ಭಾಗವನ್ನು ಉಳಿತಾಯ ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇತರೆ ಸಹಪಾಠಿಗಳಿಗೆ ನೀಡಬೇಕು. ಅಲ್ಲದೇ, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಪಡೆಯಬೇಕೆಂಬ ನಿರೀಕ್ಷೆಯನ್ನು ಪಕ್ಕಕ್ಕಿಟ್ಟು, ಸ್ವಾವಲಂಬಿಗಳಾಗಲು ಕೌಶಲ ತರಬೇತಿ ಪಡೆದುಕೊಳ್ಳಬೇಕು ’ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕಿ ಮಲ್ಲಾಜಮ್ಮ ಮಾತನಾಡಿ ‘ಸಮರ್ಥ ಹೆಣ್ಣು ಮಕ್ಕಳನ್ನು ರಾಜಕೀಯವಾಗಿ ಬೆಳೆಯಲು ಸ್ವಪಕ್ಷೀಯರೇ ಬಿಡುವುದಿಲ್ಲ. ಅನ್ಯಾಯದ ವಿರುದ್ಧ ಹೋರಾಡುವ ಮಹಿಳೆಯರು ರಾಜಕಾರಣದಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ 11 ಮಂದಿ ಶಾಸಕಿಯರು ಇದ್ದರು. ಆದರೆ ಇಂದು ಮಹಿಳೆಯರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ರಾಜಕೀಯವಾಗಿ ಮಹಿಳೆಯರಿಗೆ ಮೀಸಲಾತಿ ದೊರೆತಿದ್ದರೂ ರಾಜಕೀಯವಾಗಿ ಸಮರ್ಥವಾಗಿ ಪ್ರಾತನಿಧ್ಯ ಹೊಂದಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ಡಾ.ಎನ್.ಗಾಯಿತ್ರಿ ಉಪನ್ಯಾಸ ನೀಡಿದರು. ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಹಿಳಾ ವಿವಿ ಸಂಯೋಜಕಿ ಡಾ.ಎಚ್.ಎಂ.ಹೇಮಲತಾ, ಪ್ರಾಧ್ಯಾಪಕಿ ಶರ್ಮಿಳಾ, ಡಾ.ರೇಣುಕಾ ಮಂದ್ರೂಪ, ನಾಗರೇವಕ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !