ಸಾಲ ಮನ್ನಾ ಪ್ರಕ್ರಿಯೆ: ಜಿಲ್ಲಾಧಿಕಾರಿ ಪರಿಶೀಲನೆ

7

ಸಾಲ ಮನ್ನಾ ಪ್ರಕ್ರಿಯೆ: ಜಿಲ್ಲಾಧಿಕಾರಿ ಪರಿಶೀಲನೆ

Published:
Updated:
Deccan Herald

ಮಂಡ್ಯ: ಜಿಲ್ಲೆಯ ರೈತರ ಸಾಲಮನ್ನಾ ವಿಚಾರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ರೈತರ ಸಾಲ ಸ್ವಯಂ ಘೋಷಣೆ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಸೋಮವಾರ ವಿವಿಧ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಜಿಲ್ಲೆಯ ವಿವಿಧ ವಾಣಿಜ್ಯ ಬ್ಯಾಂಕುಗಳಲ್ಲಿ 45,728 ರೈತರು ಸಾಲ ಪಡೆದಿದ್ದಾರೆ. ಇದರ ಸಂಪೂರ್ಣ ಮಾಹಿತಿ ಬ್ಯಾಂಕ್‌ಗಳಲ್ಲಿ ಲಭ್ಯವಿದೆ. ಪ್ರತಿ ದಿನ 40 ರೈತರಿಗೆ ಟೋಕನ್ ನೀಡುವ ಮೂಲಕ ಸಮಯ ನಗದಿ ಮಾಡಲಾಗುತ್ತಿದೆ. ಸ್ವಯಂ ಘೋಷಣೆಯನ್ನು ತೆಗೆದುಕೊಳ್ಳುವ ಕೆಲಸವನ್ನು ಬ್ಯಾಂಕ್‌ಗಳು ಮಾಡುತ್ತಿವೆ. ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ರೈತರ ಪಹಣಿಯ ಪತ್ರವನ್ನು ಹಾಜರುಪಡಿಸಬೇಕು. ದಾಖಲೆಯಲ್ಲಿರುವ ಹೆಸರು ಹೊಂದಾಣಿಕೆಯಾಗದಿದ್ದರೆ ತಾಲ್ಲೂಕು ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು. ಸಮಿತಿಯಲ್ಲಿ ದಾಖಲೆಯಲ್ಲಿ ಇರುವ ವ್ಯಕ್ತಿ ಒಬ್ಬರೇ ಎಂದು ಒಪ್ಪಿಗೆ ನೀಡಿದ ನಂತರ ಆ ರೈತನ ಸಾಲಮನ್ನಾ ಆಗುತ್ತದೆ’ ಎಂದು ಹೇಳಿದರು.

‘ಕಳೆದ ಎರಡು ದಿನಗಳಿಂದ ರೈತರಿಂದ ಮಾಹಿತಿ ಕೇಳಿ ಸ್ವಯಂ ಘೋಷಣೆಯನ್ನು ತೆಗೆದುಕೊಳ್ಳುವ ಕಾರ್ಯ ಮಾಡಲಾಗುತ್ತಿದ್ದು ಯಾವುದೇ ಕಾರಣಕ್ಕೂ ರೈತರು ಭಯಪಡುವ ಅಗತ್ಯ ಇಲ್ಲ. ಡಿಸೆಂಬರ್ 28 ರವರೆಗೆ ರೈತರು ಹಸೆರು ನೋಂದಾಯಿಸಲು ಕಾಲವಕಾಶ ನೀಡಲಾಗಿದೆ. ಪ್ರತಿ ಬ್ಯಾಂಕ್ ಶಾಖೆಯಲ್ಲಿ ರೈತರು ಸಾಲ ತೆಗೆದುಕೊಂಡಿರುವ ಮಾಹಿತಿಯ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇದರ ಆಧಾರದ ಮೇಲೆ ದಿನಾಂಕ ವಿಸ್ತರಣೆ ಮಾಡಲಾಗುವುದು’ ಎಂದರು. ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್‍ನ ಅಧಿಕಾರಿ ಪ್ರಭುದೇವ್, ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !